More

    ದುಶ್ಚಟ ಜೋಳಿಗೆಗೆ ಹಾಕಿ ಉತ್ತಮ ಜೀವನ ನಡೆಸಿ

    ಕೊಡೇಕಲ್ : ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗಿ ಸುಂದರ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಗಡಿ ಅಕ್ಕಿಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

    ಬೂದಿಹಾಳದಲ್ಲಿ ಶನಿವಾರ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಕರ‍್ಯಕ್ರಮಕ್ಕೆ ಚಾಲನೆ ನೀಡಿದ ಅವರು, ದೇಹ ದೇವರು ಕೊಟ್ಟ ಕಾಯ. ಇದು ಹಿಟ್ಟಿನ ಗಿರಣಿಯಂತೆ. ಅದರಲ್ಲಿ ಏನು ಹಾಕಿದರೂ ಬೀಸುತ್ತದೆ ಎಂದುಕೊAಡು ಕಲ್ಲು-ಮಣ್ಣು ಹಾಕಿ ಬೀಸುವ ಕಲ್ಲನ್ನು ಹಾಳು ಮಾಡಿಕೊಳ್ಳಬೇಡಿ. ಹಿಂದೆ ಗ್ರಾಮೀಣ ಯುವಕರು ಸದೃಢ ದೇಹ ಬೆಳೆಸಲು ಗರಡಿ ಮನೆಗೆ ಹೋಗಿ ಕಸರತ್ತು ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ದುಶ್ಚಟಗಳ ದಾಸರಾಗಿ ಚಿಕ್ಕ ವಯಸ್ಸಿನಲ್ಲೇ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಯಾವುದೇ ಮುಚ್ಚು ಮರೆ ಇಲ್ಲದೆ ನಿಮ್ಮ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ವ್ಯಸನಮುಕ್ತರಾಗಿ ಆರೋಗ್ಯಯುತ ಜೀವನ ನಡೆಸಿ ಎಂದು ಕೋರಿದರು.

    ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ಗಾಂಗೇಯಪಿತ ಸ್ವಾಮೀಜಿ, ಧರೆಪ್ಪ ಮೇಟಿ, ಶಂಕರಗೌಡ ಜೇವರ್ಗಿ, ಭೀಮನಗೌಡ ಕಕ್ಕೇರಿ, ಶಿವಪುತ್ರಪ್ಪ ಚಳಗೇರಿ, ದೇವಣ್ಣ ಜೈನಾಪುರ, ಪ್ರಭು ಹಿರೇಮಠ, ಶಿವರಾಜ ಬಿರಾದಾರ, ಶರಣಗೌಡ ಬಿರಾದಾರ, ನಂದನಗೌಡ ಕಕ್ಕೇರಿ, ಸಂಗಣ್ಣ ಮಾನಬಾವಿ, ಶರಣಬಸವ ಧನ್ನೂರ, ಹಣಮಂತ್ರಾಯ ಮಡ್ಡಿ, ಪರಮಣ್ಣ ಕಲಕೇರಿ, ಸಂಗಣ್ಣ ದೋರನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts