More

    ದುಶ್ಚಟಗಳಿಗೆ ಬಲಿಯಾಗದಿರಿ

    ಗದಗ: ಜಿಲ್ಲಾ ಆಯುಷ್ ಇಲಾಖೆ ತಯಾರಿಸಿದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೆದ ಕಷಾಯಪುಡಿ, ಹೋಮಿಯೋಪಥಿ ಔಷಧವನ್ನು ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ವಿುಕರಿಗೆ ಗುರುವಾರ ವಿತರಿಸಲಾಯಿತು.

    ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ, ನಗರಸಭೆಯ ಪೌರಾಯುಕ್ತ ಮನ್ಸೂರ ಅಲಿ ಅವರು ಔಷಧ ವಿತರಿಸಿದರು. ಡಾ.ಸುಜಾತಾ ಪಾಟೀಲ ಮಾತನಾಡಿ, ಜನರಲ್ಲಿ ರೋಗ ನಿರೋಧಕ ಶಕ್ತಿಯನುಸಾರ ರೋಗಗಳು ಬರುತ್ತವೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಮೂಲಕ ರೋಗಗಳಿಂದ ದೂರ ಇರಬಹುದಾಗಿದೆ. ಪೌರ ಕಾರ್ವಿುಕರು ಕರೊನಾ ಸೇನಾನಿಗಳಾಗಿದ್ದಾರೆ. ಅವರು ಸೋಂಕು ಪೀಡಿತ ಪ್ರದೇಶಗಳೆನ್ನದೆ ಅವಳಿ ನಗರದಲ್ಲಿನ ಜನರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೌರ ಕಾರ್ವಿುಕರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ ಎಂದರು.

    ಪೌರ ಕಾರ್ವಿುಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪೌರಾಯುಕ್ತರು ಮಾತನಾಡಿ, ಪೌರಕಾರ್ವಿುಕರ ಆರೋಗ್ಯದ ಬಗ್ಗೆ ನಗರಸಭೆ ಸಾಕಷ್ಟು ಕಾಳಜಿ ವಹಿಸಿದೆ ಎಂದರು. ಆಯುಷ್ ಇಲಾಖೆಯ ಹೋಮಿಯೋಪಥಿ ವೈದ್ಯ ಸಂಜೀವ ನಾರಪ್ಪನವರ ಮಾತನಾಡಿದರು. ಆಯುಷ್ ಇಲಾಖೆಯ ವೈದ್ಯರಾದ ಡಾ. ಮಹೇಶ ಹಿರೇಮಠ, ಡಾ.ಪ್ರವೀಣ ಸರ್ವದೆ, ಡಾ. ಆಶಾ ನಾಯಕ, ಸುಧಾತಾಯಿ ಜಾಲಿಹಾಳ, ಬಸಯ್ಯಸ್ವಾಮಿ ಕಲ್ಮಠ, ಸಚಿನ್ ಚಿಕ್ಕೋಡೇಕರ, ಮುರಾರ್ಜಿ ದಾಸನಾಯ್ಕರ, ತೌಸೀಫ್ ರೋಣದ, ಕಿರಣ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts