More

    ದುರ್ನಾತ ಬೀರುತ್ತಿದೆ ಕಲ್ಗುಡಿ ಪ್ಲಾಟ್

    ಗಜೇಂದ್ರಗಡ: ಪುರಸಭೆ ವ್ಯಾಪ್ತಿಯ ಕಲ್ಗುಡಿ ಪ್ಲಾಟಿನಲ್ಲಿ ಗಟಾರು ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕೊಳಚೆ ಹರಿದು ದುರ್ನಾತ ಬೀರುತ್ತಿದೆ. ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಭಾನುವಾರ ಆಗ್ರಹಿಸಿದರು.

    ಪುರಸಭೆ ಕಾರ್ಯಾಲಯದ ಕೂಗಳತೆ ದೂರದಲ್ಲಿರುವ ಕಲ್ಗುಡಿ ಅವರ ಪ್ಲಾಟಿನಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಪಟ್ಟಣದ ಎಲ್ಲ ವಾರ್ಡ್​ನಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಭರದಿಂದ ನಡೆದಿವೆ. ಆದರೆ ಹಿರೇದುರ್ಗಮ್ಮಾದೇವಿ ದೇಗುಲ ಬಳಿಯ ಕಲ್ಗುಡಿ ಓಣಿಯಲ್ಲಿ ಗಟಾರ್ ನಿರ್ವಣವಾಗಿಲ್ಲ. ಮಣ್ಣಿನ ರಸ್ತೆ ಮೇಲೆ ಚರಂಡಿ ಕೊಳಚೆ ಹರಿದು ಇಡೀ ಓಣಿ ಗಬ್ಬೆದ್ದು ನಾರುತ್ತಿದೆ. ಮಹಿಳೆಯರು, ಮಕ್ಕಳು, ವೃದ್ಧರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಬಳಲುತ್ತಿದ್ದರೂ ವಾರ್ಡ್ ಸದಸ್ಯ ಮುದಿಯಪ್ಪ ಮುಧೋಳ ಸೇರಿದಂತೆ ಯಾರೊಬ್ಬರೂ ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕೆಲ ದಿನಗಳ ಹಿಂದೆ ಶಾಸಕ ಕಳಪ್ಪ ಬಂಡಿ ಅವರನ್ನು ಒತ್ತಾಯಿಸಲಾಗಿತ್ತು. ಶಾಸಕರು ಅಧಿಕಾರಿಗಳಿಗೆ ನೀಡಿದ ಆದೇಶದಿಂದ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಶಂಕರಪ್ಪ ಪಾತ್ರೋಟಿ, ಯಮನೂರಪ್ಪ ಲಕ್ಕಲಕಟ್ಟಿ, ಸಮೀರ ಆರಗಿದ್ದಿ, ಮಕ್ತುಂಸಾಬ್ ಚಾಮಲಾಪುರ, ಸಂಗಪ್ಪ ಯಂಕಂಚಿ, ಬಸವರಾಜ ಪೂಜಾರ, ಹನುಮಂತ ಕುಕನೂರ, ಶ್ರೀಕಾಂತ ಪಾತ್ರೋಟಿ ಇತರರಿದ್ದರು.

    ಕಲ್ಗುಡಿ ಪ್ಲಾಟಿನಲ್ಲಿ ಅಭಿವೃದ್ಧಿ ಕರ ತುಂಬಿಲ್ಲ. ಅಲ್ಲಿ ಮನೆ ಕಟ್ಟುವರು ಕೆಲವರು ತುಂಬಿದ್ದಾರೆ. ಹೀಗಾಗಿ ಬಡಾವಣೆ ಅಭಿವೃದ್ಧಿ ಆಗಿಲ್ಲ. ಬಡಾವಣೆ ಜನರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
    | ಮಹಾಂತೇಶ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts