More

    ದುರ್ಗ, ಚಿಕ್ಕಮಗಳೂರು ಕೈ ಅಭ್ಯರ್ಥಿ ಘೋಷಣೆಗೆ ತಡೆ?

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರ ಹೆಸರು ಘೋಷಣೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ ಎನ್ನಲಾಗಿದೆ.
    ಗುರುವಾರ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಪಕ್ಷದ ಸಿಇಸಿ ಸಭೆ ಆಧರಿಸಿ ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಕೆ.ಸಿ.ವೇಣುಗೋಪಾಲ್ ಶುಕ್ರವಾರ ಹೊರಡಿಸಿದ್ದ ಆಯ್ಕೆ ಪಟ್ಟಿಯಲ್ಲಿ ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ 36 ಹೆಸರುಗಳು ಕ್ಲಿಯರ್ ಆಗಿವೆ.
    ಆದರೆ, ಚಿತ್ರದುರ್ಗ ಕ್ಷೇತ್ರಕ್ಕೆ ಬಿ.ಎನ್.ಚಂದ್ರಪ್ಪ ಹೆಸರು ಸೇರಿ ಬೇರೆ ಬೇರೆ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳ ಹೆಸರನ್ನು ತಡೆ ಹಿಡಿಯಲಾಗಿದೆ ಎಂದಿದೆ.
    ರಾಜ್ಯದ ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು (ಇನ್ನೂ ಪಕ್ಷ ಸೇರಬೇಕಿರುವ ಡಾ.ಜಯಪ್ರಕಾಶ ಹೆಗ್ಡೆ) ಹಾಗೂ ತೆಲಂಗಾಣದ ಮೆಹಬೂಬ್‌ನಗರ್ ಕ್ಷೇತ್ರದ ಅಭ್ಯರ್ಥಿಗಳ ಹೆಸರು ತಡೆ ಹಿಡಿಯಲಾಗಿದ್ದು, ಪರಿಷ್ಕೃತ ಪಟ್ಟಿಯಲ್ಲಿ ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳು ಹೆಸರುಗಳು ಅಂತಿಮವಾಗಿದೆ.
    ಕರ್ನಾಟಕದ ವಿಜಯಪುರ, ಹಾವೇರಿ, ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಅಭ್ಯರ್ಥಿಗಳು ಹೆಸರುಗಳು ಪರಿಷ್ಕೃತ ಪಟ್ಟಿಯಲ್ಲಿವೆ. ಆದರೆ, ಈ ಪಟ್ಟಿಯಲ್ಲಿ ತಡೆಹಿಡಿದಿದ್ದ ಮೂವರು ಅಭ್ಯರ್ಥಿಗಳ ಹೆಸರುಗಳು ಇಲ್ಲ.
    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂ ಕ್ಷೇತ್ರ ಕಲಬುರಗಿ ಹಾಗೂ ಚಾಮರಾಜನಗರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಲಿರುವ ಅಭ್ಯರ್ಥಿಗಳೊಂದಿಗೆ ಚಿತ್ರದುರ್ಗ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ ಎನ್ನಲಾಗಿದೆ.
    ಹೈಕಮಾಂಡ್ ಮಾ.11ರಂದು ರಾಜ್ಯದ ಇನ್ನಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts