More

    ದುರ್ಗಾ ಮಾತಾ ದೌಡ್ ಮೆರವಣಿಗೆ


    ಚಿತ್ರದುರ್ಗ: ಕೆಳಗೋಟೆ ಮರಾಠ ವಿದ್ಯಾವರ್ಧಕ ಸಂಘ ಹಾಗೂ ಹಿಂದು ಸಂಘಟನೆಗಳ ಆಶ್ರಯದಲ್ಲಿ ವಿಜಯದಶಮಿ ಅಂಗವಾಗಿ‘ದುರ್ಗಾಮಾ ತಾ ದೌಡ್’ಮೆರವಣಿಗೆ ನಗರದಲ್ಲಿ ಭಾನುವಾರ ನಡೆಯಿತು.
    ರಂಗಯ್ಯಯನ ಬಾಗಿಲು ಬಳಿ ನಗರದ ದೇವರಾಜ ಅರಸು ವಿದ್ಯಾಸಂಸ್ಥೆ ಕಾರ‌್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಅವರು, ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಉದ್ಘಾಟಿಸಿದರು. ಕುಡಾ ಮಾಜಿ ಅಧ್ಯಕ್ಷ ಟಿ.ಬದ್ರಿನಾಥ್ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
    ದೊಡ್ಡಪೇಟೆ,ಉಚ್ಚಂಗಿಯಲ್ಲಮ್ಮ ದೇವಸ್ಥಾನ,ಚಿಕ್ಕಪೇಟೆ,ಆನೆಬಾಗಿಲು ಮಾರ್ಗ ಗಾಂಧಿವೃತ್ತದಿಂದ ಬಿಡಿರಸ್ತೆಯಲ್ಲಿ ಸಾಗಿದ ಮೆರವಣಿಗೆ, ಎಸ್‌ಬಿಐ ವೃತ್ತ,ಪ್ರವಾಸಿಮಂದಿರ ವೃತ್ತ,ವಾಸವಿ ವೃತ್ತ,ಒನಕೆ ಓಬವ್ವ ವೃತ್ತದಿಂದ ತುರುವನೂರು ರಸ್ತೆ ತಿಪ್ಪಜ್ಜಿ ಸರ್ಕಲ್ ಮೂಲಕ ಕೆಳಗೋಟೆ ಅಂಬಾಭವಾನಿ ದೇವಾಲಯ ಆವರಣದಲ್ಲಿ ಮೆರವಣಿಗೆ ಸಮಾಪನಗೊಂಡಿತು. ಬಳಿಕ ಅಂಬಾಭವಾನಿಗೆ ವಿಶೇಷ ಪೂಜೆ ಸಲ್ಲಿಸಿ,ಮಳೆಗಾಗಿ ಪ್ರಾರ್ಥಿಸಲಾಯಿತು.
    ಎರಡನೇ ವರ್ಷವೂ ನಡೆದ ಈ ಮೆರವಣಿಗೆ ಸಾಗುವ ಮಾರ್ಗದಲ್ಲಿ ಜನರು ಭಕ್ತಿ ಸಮರ್ಪಿಸಿದರು. ಭಾರತ್‌ಮಾತಾ ಕಿ ಜೈ,ದುರ್ಗಾ ಮಾತಾಕಿ ಜೈ,ಅಂಬಾಭವಾನಿ ದೇವಿಗೆ ಜೈ,ಶಿವಾಜಿ ಮಹರಾಜ್‌ಕಿ ಜೈ ಎಂಬ ಜಯಘೋಷಗಳು ಕೇಳಿ ಬಂದವು. ನಾಸಿಕ್ ಡೋಲು,ಮಂಗಳೂರಿನ ಚಂಡೆ ವಾದ್ಯದ ತಂಡಗಳು ಮೆರವಣಿಗೆ ಮೆರಗು ನೀಡಿದವು.
    ಸಂಘದ ಅಧ್ಯಕ್ಷ ಸುರೇಶ್,ಕಾರ‌್ಯದರ್ಶಿ ಗೋಪಾಲರಾಜ್‌ಜಾದವ್,ಯುವ ಮುಖಂಡ ನಿತಿನ್,ರೋಹಿತ್‌ಗಾಯಕ್ವಾಡ್,ಸೂರಜ್, ವಿನಯ್, ಪ್ರದೀಪ್,ಅರ್ಜುನ್,ವಿದ್ಯಾನಂದ,ಮಂಜುನಾಥ್,ಕೃಷ್ಣೋಜಿರಾವ್,ಕಲಾಬಾಯಿ,ಅಶ್ವಿನಿ,ಭಾರತಿಬಾಯಿ,ಆಶಾ,ಸುನೀತಾ ಬಾಯಿ,ತೇಜಲ್,ನಾಗರಾಜ್‌ಬೇದ್ರೆ ಇತರರು ಮೆರವಣಿಗೆಯಲ್ಲಿ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts