More

    ದುರ್ಗಾದೇವಿ ದುರ್ಗೋತ್ಸವ ನಾಳೆಯಿಂದ ಆರಂಭ

    ಚಿತ್ರದುರ್ಗ: ಆನೆಬಾಗಿಲು ಸಮೀಪದ ಸುವೃಷ್ಠಿ ಪ್ರಾಣ ದೇವರ ಆವರಣದಲ್ಲಿ ದುರ್ಗಾದೇವಿ ದುರ್ಗೋತ್ಸವವೂ ಅ. 15ರಿಂದ 25ರವರೆಗೂ ವಿಶೇಷವಾಗಿ ಜರುಗಲಿದೆ.

    ನವರಾತ್ರಿ ಮಹೋತ್ಸವದ ಅಂಗವಾಗಿ ಹಿಂದೂ ಘರ್ಜನೆ ಸೇನಾ ಸಂಸ್ಥಾನ ವತಿಯಿಂದ ಮೂರನೇ ವರ್ಷ ಉತ್ಸವ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥಾನದ ಅಧ್ಯಕ್ಷ ಸಾಗರ್ ತಿಳಿಸಿದರು.

    ನಿತ್ಯವೂ ದುರ್ಗಾದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಸಂಜೆ 6ರ ನಂತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22ರಂದು ಮೈಸೂರಿನ ದಯಾನಂದಶರ್ಮ ತಂಡದಿಂದ ಗಣ, ನವಗ್ರಹ, ಧನ್ವಂತರಿ, ಸುದರ್ಶನ, ನರಸಿಂಹ, ಲಕ್ಷ್ಮೀನಾರಾಯಣ, ಲಲಿತಾ, ದುರ್ಗಾ, ನವದುರ್ಗಾ ಹೋಮ, ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.

    25ಕ್ಕೆ ಶೋಭಾಯಾತ್ರೆ: 25ರಂದು ನಗರದೇವತೆಗಳ ಆಗಮನ, ನಂತರ ಮಧ್ಯಾಹ್ನ 3ಕ್ಕೆ ದುರ್ಗಾದೇವಿಯ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಾತ್ರಿ ದೇವಿಯ ಮೂರ್ತಿಯನ್ನು ಚಂದ್ರವಳ್ಳಿಯ ಬಾವಿಯಲ್ಲಿ ವಿಸರ್ಜಿಸಲಾಗುವುದು. ದೇವಿಯ ಭಕ್ತರು 10 ದಿನ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಉಪಾಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಮಂಜಣ್ಣ, ಮಧುಸೂದನ್, ದೇವರಾಜ್, ಆನಂದ, ಅರುಣ್ ಇತರರಿದ್ದರು.

    ಗಾಯತ್ರಿ ದೇಗುಲದಲ್ಲಿ ಆಚರಣೆ: ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿರುವ ಗಾಯತ್ರಿ ದೇಗುಲದಲ್ಲಿ ನವರಾತ್ರಿ ಅಂಗವಾಗಿ ಅ. 15ರಿಂದ 24ರವರೆಗೆ ದೇವರಿಗೆ ವಿಶೇಷಾಲಂಕಾರ, ನಿತ್ಯ ಸಂಜೆ 6.30ರಿಂದ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 8ಕ್ಕೆ ಮಹಾಮಂಗಳಾರತಿ ನೆರವೇರಲಿದೆ ಎಂದು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ.ಪ್ರಾಣೇಶ್‌ರಾವ್ ತಿಳಿಸಿದ್ದಾರೆ.

    ಕೂಡಲಿ ಶೃಂಗೇರಿ ಮಠ: ಜೋಗಿಮಟ್ಟಿ ರಸ್ತೆ 2ನೇ ತಿರುವಿನ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶಾಖಾ ಮಠದಲ್ಲೂ 15ರಿಂದ 24ರವರೆಗೂ ಶರನ್ನವರಾತ್ರಿ ಉತ್ಸವ ಏರ್ಪಡಿಸಲಾಗಿದೆ. 20ರಂದು ಸರಸ್ವತಿ ಆವಾಹನೆ, ಅಕ್ಷರಾಭ್ಯಾಸ, ಸಂಜೆ 7ರ ನಂತರ ಅಂಜನಾ ನೃತ್ಯ ಕಲಾಕೇಂದ್ರದ ವಿದುಷಿ ಡಾ.ನಂದಿನಿ ಶಿವಪ್ರಕಾಶ್, ವಿದ್ವಾನ್ ಶಿವಪ್ರಕಾಶ್ ತಂಡದ ಕಲಾವಿದರಿಂದ ಶಾಸ್ತ್ರೀಯ ಭರತನಾಟ್ಯ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22ರ ಬೆಳಗ್ಗೆ 8:30ರಿಂದ ವೇದಬ್ರಹ್ಮರ್ಷಿ ಹನುಮಂತರಾವ್ ತಂಡದಿಂದ ಚಂಡಿಕಾ ಹೋಮ, ಮಧ್ಯಾಹ್ನ 1.30ಕ್ಕೆ ಪೂರ್ಣಾಹುತಿ, ಸಂಜೆ 6ಕ್ಕೆ ಶೈಲಜಾ ಸುದರ್ಶನ್ ತಂಡದಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಲಿದೆ ಎಂದು ಪ್ರಧಾನ ಅರ್ಚಕ ಶ್ರೀನಾಥ್ ಮೋಕ್ಷಗುಡಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts