More

    ದುರ್ಗಮ್ಮ ದೇವಿಗೆ ಅದ್ದೂರಿ ಬೀಳ್ಕೊಡುಗೆ

    ಕೊಡೇಕಲ್: ಕೊಡೇಕಲ್ ಗ್ರಾಮಕ್ಕೆ ಆಗಮಿಸಿರುವ ಸಂಚಾರಿ ಗಾಳಿ ದುರ್ಗಮ್ಮ ದೇವಿಗೆ ಮಂಗಳವಾರ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಉಡಿ ತುಂಬವ ಮೂಲಕ ಭಕ್ತಿ ಪೂರ್ವಕವಾಗಿ ಬೀಳ್ಕೊಟ್ಟರು.

    ಗ್ರಾಮಗಳಲ್ಲಿ ಯಾವುದೇ ರೋಗ ರುಜಿನಗಳು ಬಾರದೆ ಮಳೆ ಬೆಳೆ ಸಮೃದ್ಧವಾಗಿ, ಗ್ರಾಮ ಸುಭಿಕ್ಷೆಯಿಂದ ಕೂಡರಲಿ ಎಂದು ವರ್ಷಕ್ಕೊಮ್ಮೆ ಆಗಮಿಸುವ ಏಳು ಸಂಚಾರಿ ಗಾಳಿ ದುರ್ಗಮ್ಮದೇವಿ ಕಳೆದ ಒಂದು ವಾರದಿಂದ ಕೊಡೇಕಲ್ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದ ಶ್ರೀ ಗದ್ದೆಮ್ಮ ದೇವಿ ಕಟ್ಟೆ ಬಳಿ ಸಂಚಾರಿ ದುರ್ಗಮ್ಮ ದೇವಿಯರ ಕಟ್ಟಿಗೆಯ ವಾಹನಗಳನ್ನು ನಿತ್ಯವೂ ಪೂಜಿಸಲಾಗಿತ್ತು.

    ಅರಸು ಮನೆತನದವರಾದ ರಾಜಾ ಜೀತೇಂದ್ರನಾಯಕ ಜಹಾಗೀರದಾರ್ ಅವರ ಮನೆಯಿಂದ ವಾಧ್ಯಮೇಳದೊಂದಿಗೆ ದೇವತೆಯರಿಗೆ ಉಡಿ ತುಂಬುವ ಮಂಗಲ ದ್ರವ್ಯ ತರಲಾಯಿತು. ಗದ್ದೆಮ್ಮ ದೇವಿ ಆರಾಧಕ ಹಣಮಂತ್ರಾಯ ಬಡಿಗೇರ ಸಂಚಾರಿ ದುರ್ಗಮ್ಮ ದೇವತೆಯರಿಗೆ ಭಕ್ತಿಯಿಂದ ದೈವದ ಸೀರೆ ಅರ್ಪಿಸುವುದರೊಂದಿಗೆ ಉಡಿ ತುಂಬಲಾಯಿತು.

    ನAತರ ಶಾಮಸುಂದರ ಜೋಶಿ ಮಾತನಾಡಿದರು. ರಂಗನಾಥ ದೋರಿ, ಅಪ್ಪಣ್ಣ ಗೋಸಲನಾಯಕ ದೋರಿ, ಎಸ್.ಎಸ್.ಜೋಶಿ, ಮೋಹನ ಪಾಟೀಲ್, ವೀರಸಂಗಪ್ಪ ಹಾವೇರಿ, ಬಸನಗೌಡ ಮಾಲಿಗೌಡ್ರ, ವಿರೇಶ ಜೈನಾಪುರ, ಹಣಮಂತ್ರಾಯ ಬಡಿಗೇರ, ನಿಂಗಣ್ಣ ಅಂಗಡಿ, ಸಿದ್ರಾಮ ತುಂಬಗಿ, ರಾಚಣ್ಣ ಉಪ್ಪಲದಿನ್ನಿ, ವಿರೇಶ ದೋರಿ, ಮಲ್ಲಣ್ಣ ಹೂಗಾರ, ಅಂಬಣ್ಣ ದೋರಿ, ಶಂಕರಗೌಡ ಜೇವರ್ಗಿ, ಹುಸೇನ ಚೌದ್ರಿ, ಸಂಗಣ್ಣ ಪೂಜಾರಿ, ಹಣಮಂತ್ರಾಯ ದೋರಿ, ಸೋಮಣ್ಣ ಪಡಶೆಟ್ಟಿ, ಬಸವರಾಜ ಕೋಡೆಕಲ್, ಕನಕಪ್ಪ ಜಂಗಳಿ, ಪರಶುರಾಮ ಜೈನಾಪುರ, ಬಸಣ್ಣ ಬಂಗಾರಗುAಡ, ರವಿ, ಶಿವಯ್ಯ ಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts