More

    ದುರಾಸೆಯಿಂದ ಮಾನವನಿಗೆ ಸಿಗದ ನೆಮ್ಮದಿ, ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅಭಿಮತ

    ವಿಜಯಪುರ: ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯತೆ ಪೂರೈಸುವಷ್ಟು ಸಂಪನ್ಮೂಲ ಒದಗಿಸುತ್ತದೆ. ಆದಾಗ್ಯೂ ಮನುಷ್ಯ ದುರಾಸೆಗಳಿಗೆ ಬಲಿಯಾಗಿ, ನೆಮ್ಮದಿಯಿಂದ ದೂರಾಗುತ್ತಿದ್ದಾನೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದರು.

    ಪಟ್ಟಣಲ್ಲಿ ಗುರುವಾರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರು ಯುವ ಕೇಂದ್ರ, ಗಾಂಧಿ ಸ್ಮಾರಕ ನಿಧಿ, ಕೆನರಾ ಬ್ಯಾಂಕ್ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆ, ಕೆನರಾ ಬ್ಯಾಂಕ್‌ನ 115ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಇಂದಿರಾ ಗಾಂಧಿ ಜನ್ಮದಿನೋತ್ಸವದಲ್ಲಿ ಮಾತನಾಡಿದರು.

    ದೇಶದಲ್ಲಿನ ದಾಸ್ಯ, ಅಸ್ಪೃಶ್ಯತೆ, ಮೇಲು, ಕೀಳು, ಜಾತಿ ಪದ್ಧತಿ ನಿರ್ಮೂಲನೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರು ಸಾಕಷ್ಟು ಶ್ರಮ ಪಟ್ಟಿದ್ದರು.ಅವರ ಹಾದಿಯಲ್ಲಿ ದಿವಂಗತ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದರು. ಎಂದು ತಿಳಿಸಿದರು.

    ಪಟ್ಟಣದ ಕೆನರಾ ಬ್ಯಾಂಕಿನ ಪ್ರಬಂಧಕಿ ಬಿ.ನೇತ್ರಾ ಮಾತನಾಡಿ, ಬ್ಯಾಂಕ್ ಮಹಿಳೆಯರ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಎಂದ ಅವರು, ಬ್ಯಾಂಕ್‌ನಿಂದ ಸಾರ್ವಜನಿಕರಿಗೆ ದೊರೆಯುವ ಸಾಲ-ಸೌಲಭ್ಯ ಹಾಗೂ ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ವಿವರ ನೀಡಿದರು.

    ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಎನ್.ಸೂರ್ಯಪ್ರಕಾಶ್ ಅವರಿಗೆ ಶ್ರೇಷ್ಠ ರಕ್ತದಾನಿ ಪ್ರಶಸ್ತಿ ಹಾಗೂ ಶ್ರೀ ಸಾಯಿ ಟ್ರೈನಿಂಗ್ ಸೆಂಟರ್ ಕೌಶಲ ಅಭಿವೃದ್ಧಿ ತರಬೇತಿದಾರರಾದ ಕೆ.ಲಕ್ಷ್ಮೀ ಆನಂದ್ ಅವರಿಗೆ ಕರೊನಾ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಜನ ಸಮನ್ವಯ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ, ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನಾಧಿಕಾರಿ ಪೂರ್ಣಿಮಾ ಜೋಗಿ, ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ಸಂಯೋಜಕ ಡಾ.ವಿ. ಪ್ರಶಾಂತ್, ವಿಕ್ಟರಿ ಯುವಕ ಸೇವಾ ಸಂಘದ ಕಾರ್ಯದರ್ಶಿ ಸುಹೇಲ್, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಿಬ್ಬಂದಿ ಸಂತೋಷ್, ಗಾಂಧಿಭವನದ ಸಿಬ್ಬಂದಿ ಮಾಬೂಬ್, ಎನ್.ಎಸ್.ಎಸ್. ಸ್ವಯಂ ಸೇವಕ ಎನ್.ಗೋಕುಲ್, ಕೆನರಾ ಬ್ಯಾಂಕಿನ ಸಿಬ್ಬಂದಿ ಬಿ.ಎನ್.ಪ್ರಶಾಂತ್ ಕುಮಾರ್, ಲೀಲಾವತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts