More

    ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೇಳಿಕೆಗೆ ಖಂಡನೆ

    ಲಕ್ಷ್ಮೇಶ್ವರ: ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ಗಳೆಂದು 6 ವರ್ಷಗಳ ಹಿಂದೆಯೇ ಶ್ರೀಮಠದ ಮೂಜಗು, 52 ಗಣ್ಯರು ಮತ್ತು ಸ್ವಾಮೀಜಿಗಳ ಸಮ್ಮುಖದಲ್ಲಿಯೇ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳನ್ನು ಕಾನೂನು ಬದ್ಧವಾಗಿಯೇ ನಿರ್ಣಯಿಸಲಾಗಿದೆ. ಅದರಂತೆ ಜಗದ್ಗುರುಗಳು ಮತ್ತು ಕಮಿಟಿಯವರು ನುಡಿದಂತೆ ನಡೆಯಬೇಕು ಎಂದು ಬಾಲೇಹೊಸೂರಿನ ಭಕ್ತರು ಒತ್ತಾಯಿಸಿದ್ದಾರೆ.

    ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಭಕ್ತರ ಸಭೆಯಲ್ಲಿ, ಶ್ರೀಗಳ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು.

    ಮುಖಂಡರಾದ ಫಕಿರೇಶ ಮ್ಯಾಟೆಣ್ಣವರ, ಅಪ್ಪಣ್ಣ ಕುಬೇರ, ನಾಗಯ್ಯ ಮಠಪತಿ, ವಿನಾಯಕ ಶಿರೋಳ ಮಾತನಾಡಿ, ದಿಂಗಾಲೇಶ್ವರ ಸ್ವಾಮೀಜಿಗಳೇ ದುಂಬಾಲು ಬಿದ್ದು ಉತ್ತರಾಧಿಕಾರಿಯನ್ನಾಗಿಸುವಂತೆ ಕೇಳಿರಲಿಲ್ಲ. ಶ್ರೀಗಳಲ್ಲಿನ ಶಕ್ತಿ, ಸಾಮರ್ಥ್ಯ, ಪ್ರಾವೀಣ್ಯತೆ, ಪ್ರಬುದ್ಧತೆ, ವಾಕ್ ಚಾತುರ್ಯ ಅರಿತು ಹುಬ್ಬಳ್ಳಿ ಭಕ್ತರು, ಗಣ್ಯರು, ಮಠಾಧೀಶರು ದಿಂಗಾಲೇಶ್ವರ ಸ್ವಾಮೀಜಿಗಳನ್ನು ಒಪ್ಪಿಸಿದ್ದರು. ಆದರೆ, ಈಗ ಕೆಲವರು ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.

    ಫೆ. 23ರಂದು ಮೂರುಸಾವಿರ ಮಠದಲ್ಲಿ ಶ್ರೀಗಳು ಕರೆದ ಸಭೆಗೆ ಆಗಮಿಸಿ ಸತ್ಯಾಸತ್ಯತೆಯನ್ನು ನಾಡಿನ ಜನತೆಗೆ ಬಹಿರಂಗ ಪಡಿಸಬೇಕು. ಇದು ಮಠದ ಪ್ರಶ್ನೆಯಲ್ಲ, ನಾಡಿಗೆ ಹೆಸರಾದ ನಮ್ಮೂರ ಶ್ರೀಗಳ, ಭಕ್ತರ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು.

    52ಗಣ್ಯರ ಪೈಕಿ ಒಬ್ಬರು ಕುಟುಂಬ ಸಮೇತರಾಗಿ ದಿಂಗಾಲೇಶ್ವರ ಮಠಕ್ಕೆ ಬಂದು ಪ್ರಸಾದ ಸ್ವೀಕರಿಸಿ, ತಮ್ಮ ಮನೆಯಲ್ಲಿ ಪಾದಪೂಜೆ ಮಾಡಿಸಿಕೊಂಡಿದ್ದರು. ಇದೀಗ ಶ್ರೀಗಳಿಗೆ ಅವಹೇಳನ ಮಾಡಿದ್ದು, ಖಂಡನೀಯ ಎಂದ ಗ್ರಾಮದ ಬಸವರೆಡ್ಡಿ ಹನುಮರೆಡ್ಡಿ, ಆಡಿರುವ ಮಾತುಗಳನ್ನು ಹಿಂಪಡೆದು ಬಹಿರಂಗ ಕ್ಷಮೆ ಕೋರಬೇಕು ಎಂದರು.

    ಗಂಗಮ್ಮ ಹನಮರೆಡ್ಡಿ, ಶಿವಪ್ಪ ಕಬ್ಬೇರ, ಸಿದ್ಧಲಿಂಗಸ್ವಾಮಿ ಪಶುಪತಿಮಠ, ಹಾಲಸ್ವಾಮಿ ಡಿ.ಬಿ.ಎಂ, ದೇವೇಂದ್ರಪ್ಪ ಮರಳಹಳ್ಳಿ, ಯಲ್ಲಪ್ಪ ಸೂರಣಗಿ, ಶಂಕರಪ್ಪ ತೋಟಗೇರ, ದೇವೇಂದ್ರಪ್ಪ ಗುಳೇದ, ವಿರೂಪಾಕ್ಷಪ್ಪ ಮರಳಹಳ್ಳಿ, ಪಮ್ಮಕ್ಕ ಮಾಗಡಿ, ಬಸವಣ್ಣೆವ್ವ ಪಶುಪತಿಮಠ, ಜಯಮ್ಮ ತೋಟಗೇರ, ಈರವ್ವ ಶಿರೋಳ, ಗೋಪಾಲಪ್ಪ ಭಜಂತ್ರಿ, ಲಲಿತಾ ಮಾಗಿ, ಬಸವರಾಜ ಕೊಪ್ಪದ, ದೇವಪ್ಪ ಭಜಂತ್ರಿ, ನಾಗಪ್ಪ ಅಣ್ಣಿಗೇರಿ ಸೇರಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts