More

    ದಾಸ್ತಾನು ವಿವರಕ್ಕೆ ಕಾಲಾವಕಾಶಕ್ಕೆ ಕೋರಿಕೆ

    ಚಿತ್ರದುರ್ಗ: ರಾಜ್ಯಸರ್ಕಾರ ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದು,ಹಳೆಯ ಕೃಷಿ ಕಾಯ್ದೆ ಆಧರಿಸಿ ಜಾರಿಗೊಳಿಸಿರುವ ಎಪಿಎಂಸಿ ನಿಯ ಮಗಳಿಗೆ ಸಂಬಂಧಿಸಿದಂತೆ ದಾಸ್ತಾನು ವಿವರ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ಕೋಡುವಂತೆ ಕೋರಿ ನಗರದ ಎಪಿಎಂಸಿ ಎಣ್ಣೆ ಮಿಲ್ ಮತ್ತು ಎಣ್ಣೆ ಕಾ ಳು ಖರೀದಿದಾರರ ಸಂಘ ಹಾಗೂ ಧವಸ,ಧಾನ್ಯ ಖರೀದಿದಾರರ ಪ್ರಮುಖರು ಸೋಮವಾರ ಎಪಿಎಂಸಿ ಕಾರ‌್ಯ ದರ್ಶಿ ಬಿ.ಎಲ್.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.
    ದಾಸ್ತಾನು ವಿವರನ್ನು ಮಾ.26ರೊಳಗೆ ಸಲ್ಲಿಸುವಂತೆ ತಿಳಿಸಿದ್ದೀರಿ. ಆದರೆ ಮಾರ್ಚ್ ಅಂತ್ಯದ ಈ ವೇಳೆ, ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆಗಳಿಗೆ ವಹಿವಾಟು,ಆದಾಯ ವಿವರಗಳನ್ನು ಒದಗಿಸಬೇಕಿದೆ. ಈ ಸನ್ನಿವೇಶದಲ್ಲಿ ಏಕಾಏಕಿ ದಾಸ್ತಾನು ವಿವರ ಸಲ್ಲಿಸುವಂತೆ ಆದೇಶಿಸಿರುವುದು ಸರಿಯಲ್ಲ. ಆದ್ದರಿಂದ ಮೂರು ತಿಂಗಳ ಕಾಲ ಗಡುವು ವಿಸ್ತರಿಸಬೇಕು. ಹಳೆಯ ಕಾಯ್ದೆ ಅನ್ವಯ ವಹಿವಾಟು ನಡೆ ಸಲು ಜಾರಿಯಾಗಲಿರುವ ನಿಯಮಗಳನ್ನು 2024 ಏಪ್ರಿಲ್ 1ರಿಂದ ಜಾರಿಗೊಳಿಸಬೇಕು.
    ಮಾ.7ರವರೆಗೆ ನಮ್ಮಲ್ಲಿರುವ ದಾಸ್ತಾನು ವಿವರವನ್ನು ಛಾಪ ಕಾಗದದ ಬದಲು ಅಂಗಡಿ ಲೆಟರ್‌ನಲ್ಲಿ ಒದಗಿಸಲು ಅನುಮತಿ ಕೊಡ ಬೇಕೆಂದು ಮನವಿ ಮಾಡಿದರು.ಒಕ್ಕೂಟದ ಅಧ್ಯಕ್ಷ ಪಿ.ಗಿರೀಶ್, ಸಂಘದ ಅಧ್ಯಕ್ಷ ಕೆ.ಎಸ್.ನಾಗರಾಜ್‌ಬನಶಂಕರಿ,ಪಿ.ವೀರೇಶ್,ಟಿ.ಸು ರೇಶ್,ವಿ.ಕೆ.ದಿನೇಶ್,ರೇವಣ್ಣ,ಸತೀಶ್,ರಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts