More

    ದಾವಣಗೆರೆ ತಂಡ ಚಾಂಪಿಯನ್

    ಲಕ್ಷ್ಮೇಶ್ವರ: ವಿನಾಯಕ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸೋಮವಾರ ಮತ್ತು ಮಂಗಳವಾರ ಜರುಗಿದ ಹೊನಲು ಬೆಳಕಿನ ರಾಜ್ಯಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ದಾವಣಗೆರೆಯ ತಂಡ ಪ್ರಥಮ ಬಹುಮಾನ ಪಡೆಯಿತು.

    ದಾವಣಗೆರೆ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳ ಒಟ್ಟು 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ದಾವಣಗೆರೆ ತಂಡ ಪ್ರಥಮ ಸ್ಥಾನ ಗಳಿಸಿ 10 ಸಾವಿರ ರೂ. ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ಗುಡಗೇರಿ ಬಾಯ್್ಸ ತಂಡ ದ್ವಿತೀಯ ಸ್ಥಾನ, ಶಿಗ್ಲಿಯ ಗ್ರಾಮ ಭಾರತಿ ತಂಡ ತೃತೀಯ ಸ್ಥಾನ ಪಡೆದುಕೊಂಡವು. ದಾವಣಗೆರೆ ತಂಡದ ಸಂತೋಷ ಬೆಸ್ಟ್ ಕ್ಯಾಚರ್, ಶಿಗ್ಲಿಯ ಅಶೋಕ ಗೋದಿ ಬೆಸ್ಟ್ ಆಲ್​ರೌಂಡರ್, ಮುತ್ತು ಬೆಸ್ಟ್ ಕ್ಯಾಚರ್ ಪ್ರಶಸ್ತಿ ಪಡೆದರು.

    ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕೂಡ್ಲಮಠ ಶಾಲೆಯ ಉಪಾಧ್ಯಕ್ಷ ಸೋಮಣ್ಣ ಡಾಣಗಲ್ ಅವರು, ‘ಗ್ರಾಮೀಣ ಸೊಗಡಿನ ಕ್ರೀಡೆಗಳು, ಸಾಂಪ್ರದಾಯಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ಅಟ್ಯಾಪಟ್ಯಾ ಇತರೆ ಸಾಂಪ್ರದಾಯಿಕ ಕ್ರೀಡೆಗಳು ಇಂದು ಕ್ರಿಕೆಟ್​ನಂತಹ ಕ್ರೀಡೆಗಳ ವೈಭವೀಕರಣದಿಂದ ತೆರೆಮರೆಗೆ ಸರಿಯುತ್ತಿವೆ. ಗ್ರಾಮೀಣ ಯವಕರು ದುಶ್ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೆ ಮುಂದಾಗಬೇಕು’ ಎಂದರು.

    ಎನ್.ಸಿ. ಹುನಗುಂದ, ಯಲ್ಲಪ್ಪ ತಳವಾರ, ಶಿವಪ್ಪ ಕುರಿ, ಪ್ರವೀಣ ಹುಲಗೂರ, ಬಸವರಾಜ ಕಳಸದ, ಮಂಜುನಾಥ ಸೂರಣಗಿ, ಬಸವರಾಜ ಗಡ್ಡಿ, ಶಂಭು ಹುನಗುಂದ, ಸುರೇಶ ಗೋದಿ, ಮಲ್ಲೇಶ ಹಂಜಿ, ಈರಣ್ಣ ಅಕ್ಕೂರ, ಚಂದ್ರಣ್ಣ ತೋಟದ, ರಮೇಶ ರ್ಬಾ, ವಿನಾಯಕ ಸ್ಪೋರ್ಟ್ಸ್ ಕ್ಲಬ್​ನ ಸದಸ್ಯರು ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ್. ಲಮಾಣಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts