More

    ದಾವಣಗೆರೆ ಜಿಲ್ಲೇಲಿ 259 ಹೆಚ್ಚುವರಿ ಶಿಕ್ಷಕರ ಮರುನಿಯುಕ್ತಿ

    ದಾವಣಗೆರೆ: ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರ ಸ್ಥಳ ಮರು ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಿತು. ಜೂ. 20ರಿಂದ ಮೂರು ದಿನಗಳ ಕಾಲ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಒಟ್ಟು 259 ಶಿಕ್ಷಕರನ್ನು ಗುರುತಿಸಿ ಸ್ಥಳ ಹಂಚಿಕೆ ಮಾಡಲಾಯಿತು.
    ಶಿಕ್ಷಣ ಇಲಾಖೆ ಸೂಚನೆಯಂತೆ ಆದ್ಯತಾ ಪಟ್ಟಿಯಂತೆ ಶಿಕ್ಷಕರ ಸೇವಾಧಾರಿತವಾಗಿ ಜೂ. 20ರಂದು ಜಿಲ್ಲೆಯ ಆರೂ ತಾಲೂಕು ಕೇಂದ್ರಗಳಲ್ಲಿ 173 ಶಿಕ್ಷಕರ ಕೌನ್ಸೆಲಿಂಗ್ ನಡೆಯಿತು. ನಂತರದ ಎರಡು ದಿನದಲ್ಲಿ ಜಿಲ್ಲಾ ಗುರುಭವನದಲ್ಲಿ ಪ್ರಕ್ರಿಯೆ ನಡೆಸಲಾಯಿತು. ಇಲಾಖೆ ಮೇಲಧಿಕಾರಿ ನೇತೃತ್ವದಲ್ಲಿ 38 ಖಾಲಿ ಹುದ್ದೆಗಳಿಗೂ ಶಿಕ್ಷಕರನ್ನು ನಿಯೋಜಿಸಲಾಯಿತು.
    ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ ಅಧ್ಯಕ್ಷತೆಯಲ್ಲಿ 30 ಮುಖ್ಯ ಶಿಕ್ಷಕರು, 203 ಸಹ ಶಿಕ್ಷಕರು, 17 ದೈಹಿಕ ಹಾಗೂ ನಾಲ್ವರು ವಿಶೇಷ ಶಿಕ್ಷಕರನ್ನು ಮರುನಿಯುಕ್ತಿಗೊಳಿಸಲಾಯಿತು. ಸ್ಥಳದಲ್ಲೇ ಶಿಕ್ಷಕರಿಗೆ ಆದೇಶಪತ್ರಗಳನ್ನು ನೀಡಲಾಯಿತು. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದರು.
    ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಡಿ.ಹಾಲಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಕೆ.ಎಂ.ಎಚ್.ಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುಬಾರಕ್ ಅಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts