More

    ದಾವಣಗೆರೆ ಜಿಲ್ಲೆಯಲ್ಲಿ ಶೇ. 77.21 ಮತದಾನ 

    ದಾವಣಗೆರೆ: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ಶೇ 77.21 ರಷ್ಟು ಮತದಾನವಾಗಿದೆ. 11,13,394 ಮತದಾರರು ಹಕ್ಕು ಚಲಾಯಿಸಿದ್ದಾರೆ.

    ಜಿಲ್ಲೆಯಲ್ಲಿ 7,21,964 ಪುರುಷ, 7,20,004 ಮಹಿಳೆಯರು, 118 ಇತರರು ಸೇರಿ 14,42,086 ಮತದಾರರಿದ್ದಾರೆ. ಈ ಪೈಕಿ 5,64,256 ಪುರುಷ, 5,49,115 ಮಹಿಳೆಯರು ಹಾಗೂ 23 ಇತರ ಮತದಾರರು ಮತದಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
    ಕ್ಷೇತ್ರವಾರು ವಿವರ:
    ಜಿಲ್ಲೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ (ಶೇ 83.89)ವಾಗಿದೆ. ಇಲ್ಲಿ ಒಟ್ಟು 1,91,300 ಮತದಾರರು ಇದ್ದಾರೆ. 96,491 ಪುರುಷರಲ್ಲಿ 81,771, 94,803 ಮಹಿಳೆಯರಲ್ಲಿ 78,716, ಆರು ಮಂದಿ ಇತರ ಮತದಾರರಲ್ಲಿ ಇಬ್ಬರು ಸೇರಿ 1,60,489 ಮತ ಚಲಾವಣೆಯಾಗಿದೆ.
    ಹೊನ್ನಾಳಿ ಕ್ಷೇತ್ರದಲ್ಲಿ ಶೇ. 83.78ರಷ್ಟು ಮತದಾನ ದಾಖಲಾಗಿದೆ. ಇಲ್ಲಿ 1,98,943 ಮತದಾರರಿದ್ದಾರೆ. 99,735 ಪುರುಷರಲ್ಲಿ 84,436, 99,204 ಮಹಿಳೆಯರಲ್ಲಿ 82,238, ಇತರ ನಾಲ್ವರು ಮತದಾರರಲ್ಲಿ ಒಬ್ಬರು ಸೇರಿ 1,66,675 ಮಂದಿ ಮತ ಹಾಕಿದ್ದಾರೆ.
    ಚನ್ನಗಿರಿ ಕ್ಷೇತ್ರದಲ್ಲಿ ಶೇ 81.94ರಷ್ಟು ಮತದಾನವಾಗಿದೆ. ಇಲ್ಲಿ 1,99,468 ಮತದಾರರಿದ್ದಾರೆ. 1,00,266 ಪುರುಷರಲ್ಲಿ 83,627, 99,194 ಮಹಿಳೆಯರಲ್ಲಿ 79,824, ಇತರ ಎಂಟು ಮತದಾರರಲ್ಲಿ ಒಬ್ಬರು ಸೇರಿ 1,63,452 ಮತಗಳು ಮತಪೆಟ್ಟಿಗೆ ಸೇರಿವೆ.
    ಹರಿಹರ ಕ್ಷೇತ್ರದಲ್ಲಿ ಶೇ 79.78ರಷ್ಟು ಮತದಾನ ಆಗಿದೆ. ಇಲ್ಲಿ 2,07,517 ಮತದಾರರಿದ್ದಾರೆ. 1,03,667 ಪುರುಷರಲ್ಲಿ 84,079, 1,03,832 ಮಹಿಳೆಯರಲ್ಲಿ 81,477, ಇತರ 18 ಮಂದಿ ಜನರಲ್ಲಿ 9 ಜನರು ಸೇರಿ ಒಟ್ಟು 1,65,565 ಮತಗಳು ಸಲ್ಲಿಕೆಯಾಗಿವೆ.
    ದಾವಣಗೆರೆ ಉತ್ತರದಲ್ಲಿ ಶೇ. 67.49ರಷ್ಟು ಮತದಾನವಾಗಿದೆ. ಇಲ್ಲಿ 2,41,232 ಮತದಾರರಿದ್ದಾರೆ. 1,19,353 ಪುರುಷರಲ್ಲಿ 80,966, 1,21,841 ಮಹಿಳೆಯರಲ್ಲಿ 81,840, ಇತರ 38 ಜನರಲ್ಲಿ ಏಳು ಮಂದಿ ಸೇರಿ 1,62,813 ಜನರು ವೋಟ್ ಮಾಡಿದ್ದಾರೆ.
    ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾನ (ಶೇ 66.32)ವಾಗಿದೆ. ಇಲ್ಲಿ 2,10,668 ಮತದಾರರಿದ್ದಾರೆ. 1,04,762 ಪುರುಷರಲ್ಲಿ 70,225, 1,05,873 ಮಹಿಳೆಯರಲ್ಲಿ 69,477, ಇತರ 33 ಜನರ ಪೈಕಿ ಮೂವರು ಸೇರಿ 1,39,705 ಮತ ಚಲಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts