More

    ದಾವಣಗೆರೆ ಜಲಸಿರಿ ಕಾಮಗಾರಿಯಲ್ಲಿ ಕಳಪೆ ಆರೋಪ- ಲೋಕಾಯುಕ್ತರಿಗೆ ದೂರು

    ದಾವಣಗೆರೆ: ದಾವಣಗೆರೆಯಲ್ಲಿ ಜಲಸಿರಿ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್, ಗುತ್ತಿಗೆ ವಹಿಸಿದ ಸುಯೇಜ್‌ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ಖುದ್ದು ದೂರು ಸಲ್ಲಿಸಿದ್ದಾರೆ.
    ದಾವಣಗೆರೆ ನಗರಕ್ಕೆ ನಿತ್ಯ 770 ಲಕ್ಷ ಲೀಟರ್‌ (77 ಎಂ.ಎಲ್‌.ಡಿ) ನೀರು ಅಗತ್ಯವಿದೆ. 2046ಕ್ಕೆ ನಗರದ ಜನಸಂಖ್ಯೆ ಎಷ್ಟಾಗಬಹುದು ಎಂದು ಅಂದಾಜಿಸಿ, ನಿತ್ಯ 1,570 ಲಕ್ಷ ಲೀಟರ್‌ (157 ಎಂ.ಎಲ್‌.ಡಿ) ನೀರು ಪೂರೈಸುವ ಪರಿಕಲ್ಪನೆಯೊಂದಿಗೆ ₹ 472.20 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ‘ಸುಯೇಜ್‌ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, 2018ರ ಮೇ ತಿಂಗಳಿನಲ್ಲಿ ಕಾಮಗಾರಿ ಆರಂಭಿಸಿತ್ತು. 2022ರ ಜನವರಿಗೆ ಮುಗಿಸಬೇಕಿತ್ತು. ಆದರೆ, ಸಾಕಷ್ಟು ಕೆಲಸಗಳು ಬಾಕಿ ಇವೆ.
    ನೀರು ಶುದ್ಧೀಕರಣ ಘಟಕದಿಂದ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ನೀರು ಹರಿಸುವ ಪೈಪ್‌ಲೈನ್‌ ಕಾಮಗಾರಿಯ ವ್ಯಾಪ್ತಿ 70.35 ಕಿ.ಮೀ. ಇದ್ದು, ಇದರಲ್ಲಿ ಕೂಡ ಆನೇಕ ಕಾಮಗಾರಿ ಬಾಕಿ ಉಳಿದಿದೆ. ಓವರ್‌ಹೆಡ್‌ ಟ್ಯಾಂಕ್‌ಗಳಿಂದ ಮನೆಗಳಿಗೆ ನೀರು ಸರಬರಾಜು ಪೈಪ್‌ಲೈನ್‌ ಕಾಮಗಾರಿ ವ್ಯಾಪ್ತಿ 1,339 ಕಿ.ಮೀ ಇದ್ದು, ಇದರಲ್ಲಿ ಕೂಡ ಆನೇಕ ಕಾಮಗಾರಿ ಬಾಕಿ ಉಳಿದಿದೆ ಒಟ್ಟು 97,200 ಮನೆಗಳಿಗೆ ಸಂಪರ್ಕ ಕೊಡುವ ಗುರಿ ಹೊಂದಿದ್ದು, ಇದರಲ್ಲಿ ಇನ್ನೂ ಹಲವು ಮನೆಗಳಿಗೆ ಸಂಪರ್ಕ ಒದಗಿಸಲು ಸಾಧ್ಯವಾಗಲಿಲ್ಲ. ಜಲಸಿರಿ ಯೋಜನೆಗಾಗಿ ಹೊಸದಾಗಿ 18 ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೆಲವುಕೆಲಸ ಬಾಕಿ ಉಳಿದಿವೆ. ಯೋಜನೆಗೆ ಮಹಾನಗರ ಪಾಲಿಕೆಯ 32 ಹಳೆಯ ಓವರ್‌ಹೆಡ್‌ ಟ್ಯಾಂಕ್‌ಗಳು
    ಬಳಕೆಯಾಗಲಿದ್ದು, ಮರುನವೀಕರಣ ನಡೆಯುತ್ತಿದೆ. ಕೆಯುಐಡಿಎಫ್‌ಸಿನಡಿ ಟೆಂಡರ್ ಪಡೆದ ಸುಯೇಜ್‌ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಯು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿಗದಿತ ಅವಧಿಗಿಂತ ಹೆಚ್ಚು ವಿಳಂಬ ಮಾಡುತ್ತಿದೆ.
    ಓವರ್‌ಹೆಡ್‌ ಟ್ಯಾಂಕ್‌ಗಳ ನವೀಕರಣ ಹಾಗೂ ಯೋಜನೆಗೆ ಬಳಸಿದ ಕಬ್ಬಿಣದ ಪೈಪ್ ಗಳು ಗುಣಮಟ್ಟವಿಲ್ಲ. ಒಳ್ಳೆಯ ಕಾಂಕ್ರೀಟ್ ರಸ್ತೆ ಅಗೆದು ಗುಂಡಿ ಮಾಡಿರುತ್ತಾರೆ. ಕಳಪೆ ಕಾಮಗಾರಿ ಮಾಡುತ್ತಿರುವ ಕಂಪನಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts