More

    ದಾವಣಗೆರೆಯಲ್ಲಿ 19ರಿಂದ ಯೋಗ ಶಿಬಿರ

    ದಾವಣಗೆರೆ: ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಯೋಗಿ ಮಂದಿರ ಸಭಾಂಗಣದಲ್ಲಿ ಜೂ.18 ರಿಂದ ಮೂರು ದಿನಗಳ ಕಾಲ ಯೋಗ ಶಿಬಿರ ಆಯೋಜಿಸಲಾಗಿದೆ.
    ನಿತ್ಯ ಬೆಳಗ್ಗೆ 5-30ರಿಂದ 7 ಗಂಟೆಯವರೆಗೆ ಶಿಬಿರ ನಡೆಯಲಿದೆ. ಯೋಗಗುರು ವೈದ್ಯಶ್ರೀ ಚನ್ನಬಸವಣ್ಣ ಶಿಬಿರ ನಡೆಸಿಕೊಡಲಿದ್ದು, ಯೋಗದಿಂದ ಆರೋಗ್ಯ ಸೂತ್ರವನ್ನು ತಿಳಿಸಿಕೊಡುವರು ಎಂದು ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ವಿವಿಧ ಯೋಗ ಸಂಸ್ಥೆಗಳ ಮೂಲಕ ಸುಮಾರು 1 ಸಾವಿರ ಯೋಗಪಟುಗಳು, ಆಸಕ್ತರು ಶಿಬಿರದಲ್ಲಿ ಭಾಗವಹಿಸುವರು ನಿರೀಕ್ಷೆ ಇದೆ. ಮುಖ್ಯವಾಗಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
    ಈಗಾಗಲೆ ನಗರದಲ್ಲಿ ನಿತ್ಯ ಸುಮಾರು 70 ರಿಂದ 80 ಕಡೆಗಳಲ್ಲಿ ವಿವಿಧ ವೇಳಾವಧಿಯಲ್ಲಿ ಯೋಗ ಶಿಬಿರ ನಡೆಸಲಾಗುತ್ತಿದೆ. ಎಲ್ಲ ಜನಾಂಗಕ್ಕೂ ಯೋಗ ತಲುಪಬೇಕು ಎಂಬ ಉದ್ದೇಶದಿಂದ ಯೋಗ ಶಿಬಿರ ಆಯೋಜಿಸಿದ್ದು, ಸರ್ವರೂ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
    ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಜಿಲ್ಲಾ ಯೋಗ ಒಕ್ಕೂಟ, ಲಯನ್ಸ್ ಕ್ಲಬ್, ಸಹಯೋಗದಲ್ಲಿ ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಕ್ಲಬ್‌ನಲ್ಲಿ ಜೂ.18 ರಂದು ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
    10 ವರ್ಷದ ಒಳಗಿನವರಿಂದ ಹಿಡಿದು 51 ವರ್ಷ ಮೇಲ್ಪಟ್ಟ ವಯೋಮಾನದವರೆಗೆ ಒಟ್ಟು ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪಶ್ಚಿಮೋತ್ತಾಸನ, ಗರುಡಾಸನ, ಪರಿವೃತ್ತ ತ್ರಿಕೋನಾಸನ, ಪೂರ್ವೋತ್ತಾನಾಸನ, ವೃಕ್ಷಾಸನ, ಅಕರ್ಣ ಧನುರಾಸನ, ಮರಿಭಾಸನ, ಊರ್ದ್ವ ಧನುರಾಸನ ಇವುಗಳ ಪೈಕಿ ಯಾವುದಾದರೂ ಎರಡು ಆಸನಗಳನ್ನು ಕಡ್ಡಾಯವಾಗಿ ಮಾಡಬೇಕು. ಒಂದು ಐಚ್ಛಿಕ ಆಸನ ಪ್ರದರ್ಶಿಸಬೇಕು.
    ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಪ್ರಶಸ್ತಿಪತ್ರ ಹಾಗೂ ಪದಕವಿದೆ. ಭಾಗಿಯಾದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು ಎಂದರು. ಸ್ಪರ್ಧಿಗಳು ಪ್ರವೇಶ ಶುಲ್ಕವಿಲ್ಲದೆ ಸ್ಪರ್ಧಿಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು. ಮಾಹಿತಿಗೆ 73382-45337, 9844443119 ಲ್ಲಿಗೆ ಸಂಪರ್ಕಿಸಬಹುದು ಎಂದರು.
    ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಯು.ಸಿದ್ದೇಶಿ, ರಾಜು ಬದ್ದಿ, ಬಾದಾಮಿ ಜಯಣ್ಣ, ನಿರಂಜನ್, ಪರಶುರಾಮ್, ಡಾ.ಕೆ.ಜೈಮುನಿ, ಮಹದೇವಪ್ಪ, ಮಹಾಂತೇಶ್ ಇದ್ದರು.

    ಯೋಗ ತಂದ ಪರಿವರ್ತನೆ
    ಕಾರಣಾಂತರದಿಂದಾಗಿ ದಾವಣಗೆರೆ ಬಂಧೀಖಾನೆ, ಬಳ್ಳಾರಿ ಜೈಲು ಸೇರಿ ಒಟ್ಟು 7 ವರ್ಷ ಕೈದಿಯಾಗಿ ನಂತರ ಬಿಡುಗಡೆಗೊಂಡ ಎಂ.ಚಂದ್ರಶೇಖರ ಅವರು ಯೋಗ ಸಾಧನೆ ಮಾಡಿ ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಯೋಗ ಒಕ್ಕೂಟ ದಾವಣಗೆರೆ ಕಾರಾಗೃಹದಲ್ಲಿ ಯೋಗ ಶಿಬಿರ ನಡೆಸಿದಾಗ ನಾನು ಭಾಗವಹಿಸಿ ಪ್ರೇರೇಪಿತನಾಗಿದ್ದೆ. ಈಗ ಪರಿವರ್ತನೆ ಹೊಂದಿದ್ದೇನೆ. ಇದು ನನ್ನ ವ್ಯಕ್ತಿತ್ವ ಕಲ್ಪಿಸಿದೆ. ಅನೇಕರಿಗೆ ಯೋಗ ಕಲಿಸಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts