More

    ದಾವಣಗೆರೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ- ಬಿಜೆಪಿ ಬಂದ್ಮೇಲೆ ನಿರುದ್ಯೋಗಿಗಳು ಹೆಚ್ಚಳ-ಎಸ್ಸೆಸ್ಸೆಂ

    ದಾವಣಗೆರೆ: ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ವಿದ್ಯಾವಂತರು ಕೆಲಸವಿಲ್ಲದೆ ಬೀದಿಗೆ ಬಂದು ನಿಂತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
    ನಗರದ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ, ಮಹಿಳೆಯರು ಉಚಿತ ಬಸ್ ಪ್ರಯಾಣಿಸುವ ರಾಜ್ಯ ಸರ್ಕಾರದ ನೂತನ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
    ಯುರೋಪ್ ಇತರೆ ಮುಂದುವರಿದ ರಾಷ್ಟ್ರಗಳಲ್ಲಿ ಶೇ.1ರಿಂದ 2ಕ್ಕಿಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚದಂತೆ ಸರ್ಕಾರಿ ನೀತಿ ರೂಪಿಸಿ ಬಜೆಟ್‌ನಲ್ಲೇ ಹಣ ಮೀಸಲಿಡಲಾಗುತ್ತಿದೆ. ಈ ಕಾರ್ಯ ಇದೀಗ ಕರ್ನಾಟಕ ರಾಜ್ಯದಿಂದ ಆರಂಭವಾಗಿದೆ ಎಂದರು.
    ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ 140 ಕೋಟಿ ರೂ. ಮೊತ್ತದ ಯೋಜನೆ, 30 ಕೋಟಿ ರೂ. ಮೊತ್ತದಲ್ಲಿ ದಾವಣಗೆರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ಆಡಳಿತದಲ್ಲಿ ನಿರ್ಧರಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಆ ಕಾಮಗಾರಿಗಳಿಗೆ ತಡೆ ಹಾಕಿತು. ಈಗ ಆ ಎಲ್ಲ ದಾಖಲಾತಿಗಳನ್ನು ತೆಗೆಸಲು ಸೂಚಿಸಿದ್ದೇವೆ ಎಂದು ಹೇಳಿದರು.
    ದಾವಣಗೆರೆಯಲ್ಲಿ ಈ ಹಿಂದಿದ್ದ ಖಾಸಗಿ ಬಸ್ ನಿಲ್ದಾಣವನ್ನು ರಾತ್ರೋರಾತ್ರಿ ಒಡೆದು ಹಾಕಿದ ಬಿಜೆಪಿಗರು, ಕಾಂಗ್ರೆಸ್ ಸರ್ಕಾರ ಮಾಡಿದ್ದ ಯೋಜನೆಯನ್ನು ಕೈಬಿಟ್ಟು ಅದ್ವಾನದ ಬಸ್ ನಿಲ್ದಾಣವನ್ನು ನಿರ್ಮಿಸಿದ್ದಾರೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಮಾಡಿರಬಹುದು. ಈ ಕಾಮಗಾರಿಯನ್ನು ತನಿಖೆಗೆ ವಹಿಸಲಾಗುವುದು ಎಂದು ತಿಳಿಸಿದರು.
    ಜಿಲ್ಲೆಯಲ್ಲಿ 11 ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಬಂದ್ ಮಾಡಿತ್ತು. ನಾವು ಅದನ್ನು
    ಬಿಜೆಪಿ ಅವಧಿಯಲ್ಲಾದ ಡಿಸಿಎಂ ರೈಲ್ವೆ ಅಂಡರ್‌ಪಾಸ್ ವ್ಯವಸ್ಥಿತವಾಗಿಲ್ಲದ್ದರ ಬಗ್ಗೆ ನಾನು ಗಲಾಟೆ ಮಾಡಿದ ಬಳಿಕ ಬದಲಿ ಕಾಮಗಾರಿ ನಡೆಸಲಾಯಿತು. ಈಗ ಅಶೋಕ ಚಿತ್ರಮಂದಿರ ಬಳಿಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಹದೆಗೆಟ್ಟಿದೆ. ಒಂದು ಸುತ್ತು ಹಾಕಿ ಬರಬೇಕು. ಜಿಲ್ಲೆಯಲ್ಲಿ ಉಳಿದಿರುವ ಬಿಜೆಪಿಯ ಜನಪ್ರತಿನಿಧಿಗಳು ಕಾರನ್ನು ಹಿಂದಕ್ಕೆ ತಿರುಗಿಸದೆಯೇ ಟರ್ನ್ ಮಾಡಿಕೊಂಡು ಬರಲಿ ಎಂದು ಸಂಸದ ಜಿ.ಎ.ಸಿದ್ದೇಶ್ವರ ಅವರಿಗೆ ಪರೋಕ್ಷ ಟಾಂಗ್ ನೀಡಿದರು. ದಾವಣಗೆರೆಗೆ ಬರುವ ಜನರು ಹೀಗಳೆಯುವಂತೆ ವ್ಯವಸ್ಥೆ ಹದಗೆಡಿಸಬಾರದು ಎಂದರು.
    *ಅಭಿವೃದ್ಧಿ ಪಥದತ್ತ ಜಿಲ್ಲೆ
    ಈ ಹಿಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಐದನೇ ತಾರೀಕಿಗೆ ಬಂದರೆ ಆರು ಇಲ್ಲವೇ ಏಳನೇ ತಾರೀಕಿಗೆ ಹೋಗುತ್ತಿದ್ದರು. ಇನ್ನು ಅದಕ್ಕೆ ಅವಕಾಶವಿಲ್ಲ. ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕಲ್ಪಿಸಿದ್ದು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು. ಹೆಚ್ಚಿನ ಯೋಜನೆಗಳನ್ನು ತಂದು ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
    ಜನರಿಗೆ ಆರೋಗ್ಯ ಮತ್ತು ಸೂರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪದಿಂದ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ಆಗಸ್ಟ್ 15ರೊಳಗಾಗಿ, ಕಾಂಗ್ರೆಸ್ ನೀಡಿದ್ದ ಎಲ್ಲ ಐದೂ ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುವುದು ಶತಸ್ಸಿದ್ಧ. ಮೊದಲ ಕಾರ್ಯಕ್ರಮವಾಗಿ ಶಕ್ತಿ ಯೋಜನೆ ಆರಂಭವಾಗಿದ್ದು ಇದು ಸದುಪಯೋಗ ಆಗಬೇಕು.
    ಮನೆ ಯಜಮಾನಿಗೆ 2 ಸಾವಿರ ರೂ. ನೆರವು ನೀಡುವ ಯೋಜನೆ ಸರಳವಲ್ಲ. 13 ಬಾರಿ ಆರ್ಥಿಕ ಸಚಿವರಾಗಿ ಅನುಭವವುಳ್ಳ ಸಿಎಂ ಸಿದ್ದರಾಮಯ್ಯ ಅವರು ಇದರ ರೂಪುರೇಷೆ ಹಾಕಿಕೊಂಡೇ ಇದನ್ನು ಜಾರಿಗೆ ತರುತ್ತಿದ್ದಾರೆ. ದೇಶದಲ್ಲಿ ಶೆ.98ರಷ್ಟು ಮಂದಿ 200 ಯೂನಿಟ್ ಒಳಗೆ ಹಾಗೂ ಶೇ.88ರಷ್ಟು ಜನರು 100 ಯೂನಿಟ್ ಒಳಗೆ ವಿದ್ಯುತ್ ಬಳಸುತ್ತಿದ್ದಾರೆ. ಈ ಮಾನದಂಡ ಇರಿಸಿಕೊಂಡೇ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
    ಮೇಯರ್ ವಿನಾಯಕ ಪೈಲ್ವಾನ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ, ಅಬ್ದುಲ್ ಲತೀಫ್, ಶಾಂತಾ ಹುಲ್ಮನಿ, ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ.ಶ್ರೀನಿವಾಸಮೂರ್ತಿ

    ಊಟ ಸರಿಯಿಲ್ಲ..
    ಜಿಲ್ಲೆಯಲ್ಲಿ 11 ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಬಂದ್ ಮಾಡಿತ್ತು. ನಾವದನ್ನು ಮರು ಆರಂಭಿಸಿದ್ದೇವೆ ಎಂದು ಸಚಿವರು ಹೇಳುತ್ತಿದ್ದಂತೆ ಸಭಿಕರೊಬ್ಬರು ‘ಊಟ ಸರಿಯಿಲ್ಲ’ ಎಂದು ಕೂಗು ಹಾಕಿದರು. ‘ಈಗ ಆರಂಭ ಮಾಡಿಸಿದ್ದೇವೆ. ಆಮೇಲೆ ನಿನಗೆ ಒಳ್ಳೆಯ ಊಟ ಹಾಕಿಸೋಣ ತಡಿ’ ಎಂದು ಪ್ರತಿಕ್ರಿಯಿಸಿದರು.

    ಕೆಲಸ ಮಾಡಲಾಗದಿದ್ರೆ ವರ್ಗ ಮಾಡಿಸಿಕೊಳ್ಳಿ
    ತಾಲೂಕು ಕಚೇರಿ, ನಗರಪಾಲಿಕೆ, ಎಸಿ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಒಳಗೊಂಡು ಜಿಲ್ಲೆಯ ಅಧಿಕಾರಿಗಳು ಸಾರ್ವಜನಿಕರಿಂದ ದೂರು ಬರದಂತೆ ಬಡವರ ಪರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ವರ್ಗ ಮಾಡಿಸಿಕೊಂಡು ಹೋಗಿ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
    ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಸಿಟ್ಟು ಪ್ರದರ್ಶಿಸಿದ ಸಚಿವರು ‘ಅವರೇನು ಊರಲ್ಲಿದ್ದಾರಾ ಅಥವಾ ಮನೆಯವರೊಂದಿಗೆ ಟೂರ್ ಹೋಗಿದ್ದಾರಾ? ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೇಲಧಿಕಾರಿಗಳು ಜನಪ್ರತಿನಿಧಿಗಳ ಜತೆಗಿರಬೇಕು ಎಂದು ಹೇಳಿದರು.

    ಷರತ್ತು ಕೈಬಿಡಲು ಕಲಾಪದಲ್ಲಿ ಪ್ರಸ್ತಾವ- ಎಸ್ಸೆಸ್
    ಹೆಣ್ಣುಮಕ್ಕಳು, ಪುರುಷರು ಯಾರು ಎಂಬುದು ಸಹಜವಾಗಿಯೇ ಗೊತ್ತಾಗುತ್ತದೆ. ಹೀಗಿರುವಾಗ ಆ ಚೀಟಿ, ಈ ಚೀಟಿ ತರಬೇಕು ಎಂಬುದಾಗಿ ಸರ್ಕಾರ ನಿಬಂಧನೆ ವಿಧಿಸಿರುವುದು ಸರಿಯಲ್ಲ. ಅಲ್ಲದೆ ಹೊರರಾಜ್ಯದ ಮಹಿಳೆಯವರೂ ತಾನೆ. ಅವರೂ ಓಡಾಡಿದರೆ ತಪ್ಪೇನು? ಈ ಬಗ್ಗೆ ತಾವು ಶಾಸನಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
    ಅಸುರರ ಕಾಟದಿಂದ ತಪ್ಪಿಸಿಕೊಳ್ಳಲು ಬ್ರಹ್ಮ-ವಿಷ್ಣು-ಮಹೇಶ್ವರರು ಸಾಕಾಗಿ ಕಡೆಗೆ ಪಾರ್ವತಿದೇವಿಗೆ ಶಕ್ತಿ ಧಾರೆ ಎರೆದು ಸಂಹಾರ ಮಾಡಿಸಲು ಮುಂದಾದರು. ಕರ್ನಾಟಕ ಸರ್ಕಾರ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಮೂಲಕ ಅವಕಾಶ ನೀಡಿದೆ ಎಂದು ಹೋಲಿಕೆ ಮಾಡಿದರು.
    ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಹಿಳೆಯರಿಗೆ ಮೀಸಲು ಕಲ್ಪಿಸಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸಾರಿಗೆ ನಿಗಮದ ದಾವಣಗೆರೆ ವಿಭಾಗ 18.42 ಲಕ್ಷ ರೂ. ಆದಾಯದಲ್ಲಿದೆ. ಹೀಗಿರುವಾಗ ಯಾರೇ ಸ್ತ್ರೀಯರು ಬಂದರೂ ಪ್ರಯಾಣಕ್ಕೆ ನಿರಾಕರಿಸಬಾರದು. ಹಾಗೆ ಮಾಡಿದಲ್ಲಿ ಸರ್ಕಾರ, ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts