More

    ದಾವಣಗೆರೆಯಲ್ಲಿ ವಿಶ್ವ ಜೇನು ದಿನಾಚರಣೆ

    ದಾವಣಗೆರೆ: ರೈತರು ಕೃಷಿಯಲ್ಲಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಜತೆಗೆ ಜೇನು ಸಾಕಾಣಿಕೆ ಮಾಡುವುದರಿಂದ ಬೆಳೆಗಳ ಇಳುವರಿ ಹೆಚ್ಚಿಸಿಕೊಳ್ಳುವ ಜತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಬೇಸಾಯ ಶಾಸ್ತ್ರಜ್ಞ ಬಿ.ಒ.ಮಲ್ಲಿಕಾರ್ಜುನ್ ಹೇಳಿದರು.
    ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ‘ಪರಾಗಸ್ಪರ್ಶ ಸ್ನೇಹಿ ಕೃಷಿ ಉತ್ಪಾದನೆಯಲ್ಲಿ ಜೇನುನೊಣದ ಪಾತ್ರ’ ಧ್ಯೇಯ ವಾಕ್ಯದೊಂದಿಗೆ ವಿಶ್ವ ಜೇನು ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಗ್ರ ಕೃಷಿಯಲ್ಲಿ ರೈತರು ನಂಬಿಕೆ ಇಡಬೇಕು. ಜೇನು ಕೃಷಿ ಅಧಿಕ ಲಾಭ ತಂದುಕೊಡಲಿದೆ ಎಂದರು.
    ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ವಿಶ್ವಸಂಸ್ಥೆ 2018ರಿಂದ ಪ್ರತಿ ವರ್ಷ ಮೇ 20ರಂದು ಜೇನು ಸಾಕಣೆಯ ಪ್ರವರ್ತಕ ಆಂಟನ್ ಜಾನ್ಸ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶ್ವ ಜೇನು ದಿನ ಅಚರಿಸಲಾಗುತ್ತಿದೆ ಎಂದರು.
    ಜೇನು ಕೃಷಿಯಲ್ಲಿ ಅತ್ಯಮೂಲ್ಯವಾದ ಮಹತ್ವ ಹೊಂದಿದ್ದು, ವೈಜ್ಞಾನಿಕವಾಗಿ ಜೇನು ಸಾಕಣೆಯಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷ ಉಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
    ಕಳೆದ 8 ವರ್ಷಗಳಿಂದ ಜೇನು ಸಾಕಣೆ ಮಾಡುತ್ತಿದ್ದು, ಇದನ್ನು ಪ್ರವೃತ್ತಿಯನ್ನಾಗಿ ಅಳವಡಿಸಿಕೊಂಡಿರುವುದಾಗಿ ರಾಣೆಬೆನ್ನೂರಿನ ಆಸುಂಡಿ ಗ್ರಾಮದ ಜೇನು ಸಾಕಣೆದಾರ ಮಲ್ಲಿಕಾರ್ಜುನ್ ಅನುಭವ ಹಂಚಿಕೊಂಡರು.
    ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇಟಗಿ ಶಿವಣ್ಣ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸ್ಥಳೀಯ ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts