More

    ದಾವಣಗೆರೆಯಲ್ಲಿ ಫೆ.3ರಿಂದ ರಾಜ್ಯ ಕೃಷಿ ಮೇಳ 

    ದಾವಣಗೆರೆ: ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ಯು.ಎಸ್.ಕಮ್ಯುನಿಕೇಷನ್ ಸಹಯೋಗದಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಫೆ.3ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕೃಷಿ ಮೇಳ ಆಯೋಜಿಸಲಾಗಿದೆ.
    ನಗರದಲ್ಲಿ ಎರಡನೇ ಬಾರಿಗೆ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಡಾ. ಸಾಯಿಲ್ (ದ್ರವರೂಪದ ಜೈವಿಕ ಗೊಬ್ಬರ) ಸಹಕಾರ ನೀಡಿದೆ ಎಂದು ಮೈಕ್ರೋಬಿ ಫೌಂಡೇಷನ್‌ನ ಜಿಲ್ಲಾ ಸಂಚಾಲಕ ಮಹದೇವಪ್ಪ ದಿದ್ದಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸುಧಾರಿತ ಸಮಗ್ರ ಸುಸ್ಥಿರ ಕೃಷಿ ಪದ್ಧತಿ, ತಾಂತ್ರಿಕ ಸಾವಯವ ಕೃಷಿ, ಮಣ್ಣಿನ ಫಲವತ್ತತೆ, ಬೀಜ ತಳಿಗಳ ಕುರಿತಾದ ಪ್ರಾತ್ಯಕ್ಷಿಕೆಗಳು, ಅತ್ಯಾಧುನಿಕ ಯಂತ್ರಗಳು, ಆರೋಗ್ಯ ಸಂಬಂಧಿತ ಪೇಯಗಳು, ಜಾನುವಾರು ಪರಿಪಾಲನೆ, ಸುಧಾರಿತ ಪಶು ಆಹಾರ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಅದರ ಮಹತ್ವ, ಸಮಗ್ರ ಕೃಷಿ ದ್ವಿದಳ ಧಾನ್ಯಗಳ ಪ್ರಯೋಜನದ ಬಗ್ಗೆ ಮೇಳದಲ್ಲಿ ಮಾಹಿತಿ ಸಿಗಲಿದೆ. ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು ಅನುಭವಿ ರೈತರ ವಿಚಾರಧಾರೆಗಳು ಹಾಗೂ ಸಂವಾದ ಇರಲಿದೆ ಎಂದು ತಿಳಿಸಿದರು.
    ಫೆ.3ರಂದು ಬೆಳಗ್ಗೆ 11-30ಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕೃಷಿ ಮಳಿಗೆಗಳಿಗೆ ಚಾಲನೆ ನೀಡುವರು. ಮೇಳವನ್ನು ಶಾಸಕ ಎಸ್.ಎ.ರವೀಂದ್ರನಾಥ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಪಂ ಸಿಇಒ ಡಾ. ಎ.ಚನ್ನಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಡಾ. ಹನಿಯೂರು ಚಂದ್ರೇಗೌಡ, ಡಾ. ಶಿವಾನಂದ ಹೊಂಗಲ್ ಭಾಗವಹಿಸುವರು.
    ಫೆ.4ರಂದು ಬೆಳಗ್ಗೆ 11 ಗಂಟೆಗೆ ಸಾಧಕರೊಂದಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ. 5ರಂದು ಬೆಳಗ್ಗೆ 11 ಗಂಟೆಗೆ ಪ್ರಗತಿಪರ ರೈತರಿಗೆ ಸನ್ಮಾನ ನಡೆಯಲಿದ್ದು ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ. ಎಸ್.ವಿ. ರಾಮಚಂದ್ರಪ್ಪ, ಮಾಡಾಳು ವಿರೂಪಾಕ್ಷಪ್ಪ ಭಾಗವಹಿಸುವರು ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಯು.ಎಸ್. ಕಮ್ಯುನಿಕೇಷನ್‌ನ ಎಂ.ಎಸ್.ಕೆ.ಉಮಾಪತಿ, ಮೇಳದ ಸಂಘಟನ ಕಲ್ಮೇಶ್, ರವಿಯೋಗರಾಜು, ಬಿ.ಸಿ.ವಿಶ್ವನಾಥ್, ಜೆ.ಎಂ. ಕಾರ್ತಿಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts