More

    ದಾನಿಗಳ ಸಹಾಯ ಮರೆಯಬಾರದು, ಶಾಸಕ ಗೌರಿಶಂಕರ್ ಸಲಹೆ

    ದಾಬಸ್‌ಪೇಟೆ: ಕರೊನಾ ಸೋಂಕು ನಿಯಂತ್ರಣದಲ್ಲಿ ವಾರಿಯರ್ಸ್ ಜತೆಗೆ ದಾನಿಗಳ ಸೇವೆಯನ್ನು ಸರ್ಕಾರ ಮತ್ತು ಜನರು ಮರೆಯಬಾರದು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಹೇಳಿದರು.

    ದಾಬಸ್‌ಪೇಟೆಯಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕಿ ಮಂಜುಳಾ ಮೋಹನ್‌ಕುಮಾರ್ ಕೊಡಮಾಡಿದ ದಿನಸಿಕಿಟ್ ಮತ್ತು ಸೀರೆಗಳನ್ನು ಕರೊನಾ ವಾರಿಯರ್ಸ್‌ಗೆ ವಿತರಿಸಿ ಮಾತನಾಡಿದರು.

    ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೆಲವರ ಪರಿಶ್ರಮ, ಸಹಕಾರದಿಂದ ಹಲವು ಸಂಕಷ್ಟಗಳ ನಡುವೆಯೂ ಕರೊನಾದ ಮೊದಲ ಮತ್ತು 2ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಯಶಸ್ವಿಯಾಗಿದ್ದೇವೆ ಎಂದರು.

    ಸಮಾನ ವೇತನ, ಭತ್ಯೆ ಕೊಡಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸಕ್ಕೆ ತಕ್ಕುದಾಗಿ ಸರ್ಕಾರ ವೇತನ, ಭತ್ಯೆಗಳನ್ನು ನೀಡುತ್ತಿಲ್ಲ. ಇನ್ನಾದರೂ ಸಮರ್ಪಕವಾದ ವೇತನ, ಭತ್ಯೆ ಕೊಡಲು ಮುಂದಾಗಬೇಕು. ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ೋಷಿಸಿರುವ 2 ಸಾವಿರ ರೂ. ಧನಸಹಾಯವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಗೌರಿಶಂಕರ್ ಆಗ್ರಹಿಸಿದರು.

    ಶಾಸಕ ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ವಾರಿಯರ್ಸ್ ಜತೆಗೆ ಜೆಡಿಎಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದನ್ನು ಮೆಚ್ಚಿಕೊಳ್ಳಬೇಕು. ಇನ್ನಷ್ಟು ಸೇವೆ ಮಾಡಲು ದೇವರು ಅವರೆಲ್ಲರಿಗೂ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದು ಹಾರೈಸಿದರು.

    ಟಿಎಪಿಸಿಎಂಎಸ್ ನಿರ್ದೇಶಕಿ ಮಂಜುಳಾ ಮೋಹನ್‌ಕುಮಾರ್ ಮಾತನಾಡಿ, ಮುಂದೆಯೂ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸದಾ ಹೀಗೆಯೇ ಇರಬೇಕು. ಆಗ ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿ ಬರುತ್ತದೆ ಎಂದರು.

    ಸೋಂಪುರ ಹೋಬಳಿಯ ಅಂಗನವಾಡಿ, ಆಶಾ ಕಾರ್ಯಕರ್ತರು, ಪಂಚಾಯಿತಿ, ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ದಿನಸಿಕಿಟ್, ಸೀರೆ ಹಾಗೂ ಸಮವಸ ನೀಡಲಾಗಿದೆ. ಇದುವರೆಗೂ 2 ಸಾವಿರ ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ನೊಂದು ವಾರದಲ್ಲಿ ಹೋಬಳಿಯ ಪ್ರತಿ ಮನೆಗೂ ಕಿಟ್‌ಗಳನ್ನು ತಲುಪಿಸಲಾಗುವುದು ಎಂದು ಹೇಳಿದರು.

    ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಶಿವಗಂಗೆಯ ಮೇಲಣಗವಿ ಮಠದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts