More

    ರಾಜಕೀಯ ಇಚ್ಛಾಶಕ್ತಿ ಇಲ್ಲ

    ದೇವದುರ್ಗದಲ್ಲಿ ಪತ್ರ ಚಳವಳಿ

    ದೇವದುರ್ಗ: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಪಟ್ಟಣದ ಶಾಂತಿನಗರದಲ್ಲಿ ತಾಲೂಕು ಏಮ್ಸ್ ಹೋರಾಟ ಸಮಿತಿ, ಜಿಲ್ಲಾ ಅಲೆಮಾರಿ ಒಕ್ಕೂಟ ಹಾಗೂ ಬುಡ್ಗ ಜಂಗಮ ಹಗಲುವೇಷ ಕಲಾವಿದರ ಸಾಂಸ್ಕೃತಿಕ ವೇದಿಕೆಯಿಂದ ಅಂಚೆ ಪತ್ರ ಚಳವಳಿ ಅಭಿಯಾನ ಭಾನುವಾರ ನಡೆಸಲಾಯಿತು.

    ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ರಾಯಚೂರಿನಲ್ಲಿ ಹಲವು ತಿಂಗಳಿಂದ ಹೋರಾಟ ಮಾಡಲಾಗುತ್ತಿದೆ. ರಾಯಚೂರಿಗೆ ಅನೇಕ ಸಲ ಅನ್ಯಾಯವಾಗಿದೆ. ಹಿಂದೆ ಐಐಟಿ ತಪ್ಪಿಸಿ ಧಾರವಾಡಕ್ಕೆ ವರ್ಗಾಯಿಸಲಾಯಿತು. ನಂಜುಂಡಪ್ಪ ಆಯೋಗದ ವರದಿ ಪ್ರಕಾರ ಜಿಲ್ಲೆಗೆ ವಿಶೇಷ ಸೌಲಭ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಕಾರಣ ಎಂದು ದೂರಿದರು.

    ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಷ್ಟ ಭರವಸೆ ನೀಡಿಲ್ಲ. ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದಾಗ ಕೇವಲ ಭರವಸೆ ನೀಡಿ ಕೈತೊಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಿಲ್ಲೆಯಿಂದ ಅಪಾರ ಸಂಪನ್ಮೂಲ ನೀಡಲಾಗುತ್ತಿದೆ. ವಿದ್ಯುತ್, ನೀರು, ಚಿನ್ನ, ಭತ್ತ ಸೇರಿ ವಿವಿಧ ಸಂಪನ್ಮೂಗಳ ಬಳಕೆಯಾಗುತ್ತಿವೆ. ಆದರೆ, ಜಿಲ್ಲೆಯನ್ನು ಸರ್ಕಾರ ಕಡೆಗಣಿಸುತ್ತಿದೆ. ಹೀಗಾಗಿ ಪತ್ರ ಚಳವಳಿ ಆಯೋಜಿಸಿದೆ ಎಂದು ಎಚ್.ಶಿವರಾಜ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts