More

    ದಲಿತರನ್ನು ವ್ಯವಸ್ಥಿತವಾಗಿ ಮುಗಿಸಿದ ಸಿದ್ದು : ವಿಧಾನ ಪರಿಷತ್​ ಸದಸ್ಯ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪ

    ಮುಳಬಾಗಿಲು: ಕಾಂಗ್ರೆಸ್​ ಬೆಂಬಲಿಸಿಕೊಂಡು ಬರುತ್ತಿದ್ದ ದಲಿತ ಮುಖಂಡರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಗಿಸಿ, ದಲಿತರನ್ನು ಅಧಿಕಾರದಿಂದ ದೂರ ಇಟ್ಟಿರುವುದೇ ಕಾಂಗ್ರೆಸ್​ ಸಾಧನೆಯಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.


    ತಾಲೂಕಿನ ಕುರುಡುಮಲೆ ವಿನಾಯಕ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್​ಗೆ ವಲಸೆ ಬಂದು ಮಲ್ಲಿಕಾರ್ಜುನ ರ್ಖಗೆ ಅವರಿಗೆ ಸಿಗಬೇಕಾದ ವಿರೋಧ ಪಕ್ಷದ ನಾಯಕತ್ವ ಪಡೆದು ಉಪ ಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ್​ ಅವರು ಸಿಎಂ ಆಗುವುದನ್ನು ತಪ್ಪಿಸುವ ಮೂಲಕ ದಲಿತರಿಗೆ ಮೋಸ ಮಾಡಿದ್ದಾರೆ ಎಂದರು.


    ಸಿದ್ಧರಾಮಯ್ಯ ಕಾಂಗ್ರೆಸ್​ ಸೇರ್ಪಡೆಯಾಗದೇ ಇದ್ದಿದ್ದರೆ, ಅವರ ಹೆಸರು ಇಂದು ಯಾರಿಗೂ ನೆನಪೇ ಇರುತ್ತಿರಲಿಲ್ಲ. ಮಾಜಿ ಸಂಸದ ಕೆ.ಎಚ್​.ಮುನಿಯಪ್ಪ ಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದು ಸಭೆಯಲ್ಲಿ ಸಿದ್ದು ಅವರನ್ನು ಕಳ್ಳರೆಂದು ಕರೆಯುತ್ತಾರೆ, ಮಾಜಿ ಸಚಿವೆ ಮೋಟಮ್ಮ ಅವರು ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದಿದ್ದಕ್ಕೆ ನನ್ನ ಭಾಗ್ಯದ ಬಾಗಿಲು ಮುಚ್ಚಿಹೋಯಿತು ಎಂದಿದ್ದಾರೆ. ಇಂತಹ ಹಲವು ಉದಾಹರಣೆಗಳು ಸಿದ್ಧು ವಿರುದ್ಧ ಪಕ್ಷದಲ್ಲಿ ಸಿಗುತ್ತದೆ ಎಂದು ಟೀಕಿಸಿದರು.


    ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್​ ಅವರು ಅತ್ಯಂತ ಬುದ್ಧಿವಂತರಾಗಿದ್ದರೂ ಕಾಂಗ್ರೆಸ್​ ಅವರನ್ನು ಸೋಲಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್​ ಅವರು ಹೇಳಿರುವಂತೆ “ಕಾಂಗ್ರೆಸ್​ ಪಕ್ಷ ಸುಡುವ ಮನೆ’ ಎಂಬ ಮಾತು ಸತ್ಯವಾಗಿದೆ ಎಂದರು.


    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನನ್ನ ಕಾರ್ಯಕ್ಷೇತ್ರವಾಗಿದೆ. ಈ ಬಾರಿ ಕೋಲಾರ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವ ಗುರಿಹೊಂದಲಾಗಿದೆ ಎಂದು ತಿಳಿಸಿದರು.


    ಸುದ್ದಿಗೋಷ್ಠಿಗೂ ಮೊದಲು ಕುರುಡುಮಲೆ ವಿನಾಯಕ ನಗರದ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಡಾ. ಬಿ.ಆರ್​.ಅಂಬೇಡ್ಕರ್​ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು.


    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ, ಖಜಾಂಚಿ ಕೆ.ಜಿ.ವೆಂಕಟರಮಣ, ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಕೆ.ಅಶೋಕ್​, ನಗರ ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್​, ನಗರಸಭೆ ಸದಸ್ಯ ಎಂ.ಪ್ರಸಾದ್​, ಮುಖಂಡರಾದ ಶೀಗೇಹಳ್ಳಿ ಸುಂದರ್​, ಎಚ್​.ಎಸ್​.ಹರೀಶ್​, ಮೈಕ್​ ಶಂಕರ್​, ರಮೇಶ್​, ಎಂ.ಪಿ.ಅನಿಲ್​ ಕುಮಾರ್​, ಮಂಜುನಾಥ್​, ಪ್ರಕಾಶ್​ರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts