More

    ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ

    ಕೆ.ಎಂ.ದೊಡ್ಡಿ: ಹಗಲು ದರೋಡೆ ಪ್ರಕರಣ ನಡೆಸುತ್ತಿದ್ದ ಬಾಲಪರಾಧಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ ಮಹಮ್ಮದ್ ರಫೀಕ್( 24 ) ಬಂಧಿತ ಆರೋಪಿ. ಈತನ ಜತೆಗೆ ಕಳ್ಳತನದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಯನ್ನು ರಿಮ್ಯಾಂಡ್ ಹೋಂನಲ್ಲಿರಿಸಲಾಗಿದೆ. ಜ.4ರಂದು ಕಾಡುಕೊತ್ತನಹಳ್ಳಿ ಗ್ರಾಮದ ಸುನೀತಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಸುನೀತಾ ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರಕರಣ ಸಂಬಂಧ ತಂಡವನ್ನು ರಚಿಸಿ ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಜ.24ರಂದು ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಲಾಯಿತು. ಬಂಧಿತನಿಂದ 18 ಲಕ್ಷ ರೂ. ಮೌಲ್ಯದ 271 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿ, ಮೂರು ಬೈಕ್‌ಗಳು, ಆಟೋ ಹಾಗೂ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು
    ಕೆ.ಎಂ.ದೊಡ್ಡಿ ಠಾಣೆಯ ಇನ್ಸ್‌ಪೆಕ್ಟರ್ ಶಿವಮಲವಯ್ಯ, ಎಸ್‌ಐ ಬೀಮಪ್ಪ ಬಾಣಸಿ, ಎಎಸ್‌ಐ ಕರಿಗಿರಿಗೌಡ, ಸಿಬ್ಬಂದಿ ಪ್ರಭುಸ್ವಾಮಿ, ಮೋಹನ್‌ಕುಮಾರ್, ವಿಠಲ್ ಕರಿಗಾರ್, ಸುಬ್ರಹ್ಮಣ್ಯ, ನರಸಿಂಹಮೂರ್ತಿ, ರವಿಕಿರಣ್, ಲೋಕೇಶ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ನವೀನ್‌ಕುಮಾರ್, ಇನ್ಸ್‌ಪೆಕ್ಟರ್ ಶಿವಮಲ್ಲವಯ್ಯ, ಎಸ್‌ಐ ಭೀಮಪ್ಪ ಬಾಣಸಿ, ಎಎಸ್‌ಐ ವೆಂಕಟೇಶ್, ಕೃಷ್ಣ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಫೋಟೋ ಇದೆ
    ಹಗಲು ದರೋಡೆ ಪ್ರಕರಣ ನಡೆಸುತಿದ್ದ ಬಾಲಪರಾಧಿ ಸೇರಿದಂತೆ ಇಬ್ಬರನ್ನು ಬಂಧಿಸಿ ಮಾಲುಗಳನ್ನು ವಶಕ್ಕೆ ಪಡೆದ ಪೊಲೀಸರ ತಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts