More

    ದಕ್ಷಿಣ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಬಂಡಾಯ

    ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಬಂಡಾಯದ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಮಾಜಿ ಶಾಸಕ ಅಶೋಕ ಖೇಣಿಗೆ ಹೈಕಮಾಂಡ್ ಟಿಕೆಟ್ ನೀಡಿದ್ದರಿಂದ ಆಕ್ರೋಶಗೊಂಡಿರುವ ಮಾಜಿ ಸಿಎಂ ಧರ್ಮಸಿಂಗ್ ಅಳಿಯ ಚಂದ್ರಾಸಿAಗ್ ಬಂಡಾಯದ ರಣಕಹಳೆ ಮೊಳಗಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕುವ ಘೋಷಣೆ ಮಾಡಿದ್ದಾರೆ.

    ತಾಲೂಕಿನ ಕಮಠಾಣ ಹೊರವಲಯದಲ್ಲಿ ಸೋಮವಾರ ಆಯೋಜಿಸಿದ ಬೆಂಬಲಿಗ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರ ಒತ್ತಾಯದ ಮೇರೆಗೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲರೂ ನನ್ನೊಂದಿಗೆ ಕಡೆವರೆಗೂ ಇರುತ್ತೀರಿ ಎನ್ನುವ ನಂಬಿಕೆ ನನಗಿದೆ. ಕಾರ್ಯಕರ್ತರನ್ನು ಬೆಳೆಸಲು, ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಣಕ್ಕಿಳಿಯುತ್ತೇನೆ ಎಂದರು.

    ಈ ಬಾರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ. ಕೂಡಲು, ನಿಲ್ಲಲು, ನಡೆದಾಡಲು ಬಾರದ ಅಶೋಕ ಖೇಣಿಗೆ ಟಿಕೆಟ್ ನೀಡಿರುವ ಹೈಕಮಾಂಡ್ ನಿರ್ಣಯ ತಪ್ಪು. ಈ ಬಾರಿ ಖೇಣಿ ಹೀನಾಯ ಸೋಲು ಕಾಣಲಿದ್ದಾರೆ. ಒಂದು ಬಾರಿ ಸಚಿವರಾಗಿ, ಮೂರು ಬಾರಿ ಶಾಸಕರಾಗಿ ಬಂಡೆಪ್ಪ ಖಾಶೆಂಪುರ ಸಹ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ. ಕರೊನಾ ವೇಳೆ ಖಾಶೆಂಪುರ ಮನೆ ಬಿಟ್ಟು ಹೊರಬರಲೇ ಇಲ್ಲ. ಅಶೋಕ ಖೇಣಿ ಅಮೆರಿಕಾದಲ್ಲಿದ್ದರು. ಬಿಜೆಪಿ ಕೇವಲ ಆಶ್ವಾಸನೆ ಮಾತ್ರ ನೀಡುತ್ತದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಆಗುವವರು ಬ್ರೋಕರ್ ಆಗಿ ಕೆಲಸ ಮಾಡುತ್ತಾರೆ ಎಂದು ಸಿಂಗ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts