More

    ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್‌ಲಾಡ್

    ಬಳ್ಳಾರಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ಘೋಷಣೆ ಮಾಡಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಪಕ್ಷದಿಂದ ಅನ್ಯಾಯವಾಗಿದೆ. ಈಗಾಗಲೇ ಪಕ್ಷದಿಂದ ನನ್ನನ್ನು ಅರ್ಧ ಮರ್ಡರ್ ಮಾಡಲಾಗಿದೆ. ಸಂಪೂರ್ಣ ಮರ್ಡರ್ ಆಗುವ ಮುನ್ನವೇ ಜನರ ಬಳಿ ಹೋಗುತ್ತಿರುವೆ. ಇದು ನನ್ನ ರಾಜಕೀಯ ಭವಿಷ್ಯ ನಿರ್ಧರಿಸುತ್ತದೆ.

    ನಾರಾ ಭರತ್ ರೆಡ್ಡಿ ಹೆಸರು ಘೋಷಣೆ

    ಯಾವ ಮಾನದಂಡದ ಆಧಾರದ ಮೇಲೆ ನಗರ ಕ್ಷೇತ್ರದಿಂದ ನಾರಾ ಭರತ್ ರೆಡ್ಡಿ ಹೆಸರನ್ನು ಘೋಷಿಸಲಾಗಿದೆ ಎಂಬುದನ್ನು ತಿಳಿಸಬೇಕು. ಪಕ್ಷಕ್ಕೆ ಯಾರು ದುಡಿದಿದ್ದಾರೋ ಅಂಥವರಿಗೆ ಟಿಕೆಟ್ ನೀಡಬೇಕಿತ್ತು. ಅಮಾವಾಸ್ಯೆಯಂದು ನಾಮಪತ್ರ ಸಲ್ಲಿಸುವೆ. ಚುನಾವಣೆ ಮುಗಿಯುವವರೆಗೆ ಕಪ್ಪು ಬಟ್ಟೆ ಧರಿಸುವೆ ಎಂದರು.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ: ಸ್ವತಂತ್ರ ಅಭ್ಯರ್ಥಿಯಾಗಿ ಹರಪಳ್ಳಿ ರವೀಂದ್ರ

    ಕುಕ್ಕರ್ ಕೊಟ್ಟಿದ್ದಾನೆ ಎಂದು ಟಿಕೆಟ್ ಕೊಟ್ಟಿದ್ದೀರಾ ?

    ನವೆಂಬರ್‌ನಲ್ಲಿ ಸೋನಿಯಾ ಗಾಂಧಿ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿ, ಅರ್ಧ ತಾಸು ಮಾತನಾಡಿದ್ದೇನೆ. ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಇಂದು ಬೇರೆಯವರ ಪಾಲಾಗಿದೆ. ಕುಕ್ಕರ್ ಕೊಟ್ಟಿದ್ದಾನೆ ಎಂದು ಟಿಕೆಟ್ ಕೊಟ್ಟಿದ್ದೀರಾ ? ರಾಜಕೀಯವಾಗಿ ಎಷ್ಟು ಚುನಾವಣೆ ಮಾಡಿದ್ದಾರೆ. ಪಕ್ಷಕ್ಕಾಗಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

    2008ರಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯ ಇರಲಿಲ್ಲ. ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದಕ್ಕೆ ಕಾರಣ ನಾನು. ಹುಟ್ಟಿದ್ದು ಬಳ್ಳಾರಿಯ ದೊರೆಸ್ವಾಮಿ ಆಸ್ಪತ್ರೆಯಲ್ಲಿ, ಕೊನೆಯುಸಿರು ಸಹ ಇಲ್ಲೇ ಎಂದರು. ಮುಖಂಡರಾದ ಅರ್ಷದ್, ಲಕ್ಷ್ಮಣ್, ಮಲ್ಲಿಕಾರ್ಜುನ್, ಕಿರಣ್, ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts