More

    ದಂಡಾವತಿ ನದಿಗೆ ಅಣ್ಣೆಕಟ್ಟು ಕಟ್ಟಲ್ಲ; ರೈತರಿಗೆ ಮುಳುಗಡೆ ಆತಂಕ ಬೇಡ; 3 ಕಿಮೀಗೊಂದು ಬ್ಯಾರೇಜ್ ನಿರ್ಮಾಣ: ಕುಮಾರ್ ಬಂಗಾರಪ್ಪ

    ಸೊರಬ: ದಂಡಾವತಿ ಅಣೆಕಟ್ಟು ನಿರ್ಮಾಣವಾಗುತ್ತದೆ ಎಂಬ ಆತಂಕ ಚೀಲನೂರು, ಜೇಡಗೇರಿ, ನಡಹಳ್ಳಿ, ಮರೂರು, ಬನದಕೊಪ್ಪ, ನಿಸರಾಣಿ ಸೇರಿದಂತೆ ಅನೇಕ ಗ್ರಾಮಗಳ ಜನತೆಗೆ ಎದುರಾಗಿತ್ತು. ಇದೀಗ ರೈತರ ಒಂದಿಚು ಭೂಮಿಯನ್ನು ಮುಳುಗಡೆ ಮಾಡದೇ ಪ್ರತಿ ಮೂರು ಕಿ.ಮೀ. ಒಂದರಂತೆ ಬ್ಯಾರೇಜ್‌ಗಳನ್ನು ನಿರ್ಮಿಸಲಾಗುತ್ತದೆ. ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
    ಸೋಮವಾರ ನಗರದ ಶ್ರೀ ರಂಗನಾಥ ದೇವಸ್ಥಾನ ಸಮೀಪದಲ್ಲಿ ಒಂದು ಕೋಟಿ ರೂ. ವೆಚ್ಚದ ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವರದಾ ನದಿಯಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಗೆ 191 ಕೋಟಿ ರೂ. ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು 37 ಬ್ಯಾರೇಜ್‌ಗಳನ್ನು ನಿರ್ಮಿಸಿ, ರೈತರ ಜಮೀನುಗಳಿಗೆ ಶಾಶ್ವತ ನೀರುಣಿಸುವ ಕಾರ್ಯಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
    ದಿನದ 24 ಗಂಟೆಯೂ ಸಮರ್ಪಕವಾಗಿ ವಿದ್ಯುತ್ ಪೂರೈಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಗ್ರಿಡ್ ನಿರ್ಮಾಣ ಹಾಗೂ ಸರ್ವಋತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯರು ಸಹಕಾರ ನೀಡಬೇಕು ಎಂದರು.
    ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮುಂದಾಲೋಚನೆಯಿಂದ ಸೊರಬದಲ್ಲಿ 130 ಎಕರೆ ಪ್ರದೇಶವನ್ನು ಕಾಯ್ದಿರಿಸಿದ ಪರಿಣಾಮವಾಗಿ ಪ್ರಸ್ತುತ ಆಸ್ಪತ್ರೆ, ನ್ಯಾಯಾಲಯಗಳ ಸಂಕೀರ್ಣ, ವಸತಿ ನಿಲಯಗಳು, ಶಾಲಾ-ಕಾಲೇಜು, ವಿವಿಧ ಸಂಘ-ಸಂಸ್ಥೆಗಳಿಗೆ ಹಾಗೂ ವಿವಿಧ ಸಮುದಾಯಗಳಿಗೆ ಭವನಗಳ ನಿರ್ಮಿಸಲು ಮತ್ತು ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಸೂರು ಕಲ್ಪಿಸಲು ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts