More

     ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ

    ಪಾಂಡವಪುರ: ಕೆ.ಆರ್.ಪೇಟೆ ತಾಲೂಕಿನ ಸಂಗಾಪುರ ಮತ್ತು ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದ ಅಂಗವಾಗಿ ಮಹದೇಶ್ವರ ಬೆಟ್ಟದಿಂದ ಆಗಮಿಸಿರುವ ಮಹದೇಶ್ವರ ಜ್ಯೋತಿ ಯಾತ್ರೆ ಅ.9ರಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿ ಹಾಗೂ ಅ.10ರಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ಬಿಜೆಪಿ ಮುಖಂಡ ಡಾ.ಇಂದ್ರೇಶ್ ತಿಳಿಸಿದರು.
    ಮಹದೇಶ್ವರ ಜ್ಯೋತಿಯ ಒಂದು ರಥ ದುದ್ದ ಹೋಬಳಿಯ ಚಂದಗಾಲು, ಎಚ್.ಮಲ್ಲಿಗೆರೆ, ಹೊಳಲು ಮುಖಾಂತರವಾಗಿ ಶ್ರೀರಂಗಪಟ್ಟಣ ತಲುಪಲಿದೆ. ಮತ್ತೊಂದು ರಥ ಪಿಎಸ್‌ಎಸ್‌ಕೆ ಮೂಲಕ ಆರತಿ ಉಕ್ಕಡ, ಕ್ಯಾತನಹಳ್ಳಿ, ಅರಳಕುಪ್ಪೆ, ಕಟ್ಟೇರಿ, ಹಾಗನಹಳ್ಳಿ, ಚಿನಕುರಳಿ, ಕೆ.ಬೆಟ್ಟಹಳ್ಳಿ ಮಾರ್ಗವಾಗಿ ಪಟ್ಟಣದ ಮೂಲಕ ಮೇಲುಕೋಟೆ ತಲುಪಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಕುಂಭಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 6 ರಿಂದ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮೇಳದಲ್ಲಿ ಧರ್ಮಸ್ಥಳದ ಧರ್ಮದರ್ಶಿಗಳಾದ ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ 50ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು, ಸಾಧು-ಸಂತರು, ಸನ್ಯಾಸಿಗಳು ಹಾಗೂ ನಾಗಸಾಧುಗಳು ಭಾಗವಹಿಸಲಿದ್ದಾರೆ. ಅ.16 ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗವಹಿಸಲಿದ್ದಾರೆ. ಅಂದು ಜಿಲ್ಲಾಡಳಿತ ವತಿಯಿಂದ ಗಂಗಾರತಿ, ಲೇಸರ್ ಶೋ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಬಿಜೆಪಿ ಮುಖಂಡರಾದ ರಾಜೀವ್ ತಮ್ಮಣ್ಣ, ಚಿಕ್ಕಮರಳಿ ನವೀನ್‌ಕುಮಾರ್, ಬಳೇಅತ್ತಿಗುಪ್ಪೆ ಗ್ರಾಪಂ ಸದಸ್ಯ ರೇವಣ್ಣ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts