More

    ತ್ರಿವಿಧ ದಾಸೋಹಕ್ಕಾಗಿ ಜೀವನ ಮುಡಿಪಿಟ್ಟ ಸಂತ

    ಮಳವಳ್ಳಿ: ತ್ರಿವಿಧ ದಾಸೋಹದ ಮೂಲಕ ಯಾವುದೇ ಜಾತಿ-ಧರ್ಮ ಎನ್ನದೆ ಮನುಕುಲವನ್ನು ಸಂತೈಸಿದ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಗವಿಮಠದ ಪೀಠಾಧ್ಯಕ್ಷ ಶ್ರೀ ಷಡಕ್ಷರ ಸ್ವಾಮೀಜಿ ಬಣ್ಣಿಸಿದರು.

    ಸಿದ್ಧಗಂಗಾ ಕ್ಷೇತ್ರದಲ್ಲಿ ನ.21 ರಂದು ನಡೆಯಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ತೃತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದ ಪ್ರಚಾರ ರಥಕ್ಕೆ ಪಟ್ಟಣದಲ್ಲಿ ಚಾಲನೆ ನೀಡಿ ಮಾತನಾಡಿದರು.

    ಬಡವ, ಬಲ್ಲಿದ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ತ್ರಿವಿಧ ದಾಸೋಹಕ್ಕಾಗಿಯೇ ತಮ್ಮ ಜೀವಿತಾವಧಿಯನ್ನು ಸವೆಸಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಲಘಟ್ಟದಲ್ಲಿ ನಾವುಗಳಿದ್ದೇವೆ ಎನ್ನುವುದೇ ಪುಣ್ಯ. ಮೂರನೇ ವರ್ಷದ ಗದ್ದುಗೆ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

    ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಹೆಬ್ಬಣಿ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶಾಸಕ ಡಾ.ಕೆ.ಅನ್ನದಾನಿ, ತಾಪಂ ಮಾಜಿ ಅಧ್ಯಕ್ಷರಾದ ಪ್ರಕಾಶ್, ವಿಶ್ವಾಸ್, ಪುಟ್ಟಸ್ವಾಮಿ, ನಾಗೇಶ್, ಮಾಜಿ ಉಪಾಧ್ಯಕ್ಷ ಮಾಧು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಂಬರೀಶ್, ರಾಜ್ಯ ಬಿಜೆಪಿ ಮುಖಂಡ ಮುನಿರಾಜು, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಬೇಂದ್ರ, ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಮಾದೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಉಪಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ರಾಜು, ಮುಖಂಡರಾದ ಸುಂದ್ರಪ್ಪ, ಪುಟ್ಟುಬುದ್ಧಿ, ಹೆಬ್ಬಣಿ ಬಸವರಾಜು, ಮಿಲ್ಟಿ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts