More

    ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಶೀಘ್ರ

    ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ಚರಂಡಿಗಳ ಮೂಲಕ ಮಲಪ್ರಭಾ ನದಿಗೆ ಸೇರುತ್ತಿದ್ದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಬಿಡುವ ಉದ್ದೇಶದಿಂದ ಸುಮಾರು 5.12ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

    ಪಟ್ಟಣದ ಸುಣ್ಣದ ಹಳ್ಳದ ಬಳಿ ಈಚೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸುಮಾರು 5.12ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ 25ಲಕ್ಷ ರೂ. ವೆಚ್ಚದಲ್ಲಿ ಅಮರಾಪುರ ರಸ್ತೆಯಿಂದ ಗಣಾಚಾರಿಯವರ ಹೊಲದವರೆಗಿನ ರಸ್ತೆ ಸುಧಾರಣೆ ಹಾಗೂ 25ಲಕ್ಷ ರೂ. ವೆಚ್ಚದಲ್ಲಿ ಪಾರಿಶ್ವಾಡ ರಸ್ತೆಯಿಂದ ಕುಕಡೊಳ್ಳಿ ಕಡೆಗಿನ ಹೊಲದ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹೊಲದ ರಸ್ತೆಗಳ ಸುಧಾರಣೆಯಿಂದ ರೈತರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

    ಚಿನ್ನಪ್ಪ ಮುತ್ನಾಳ, ಶ್ರೀಶೈಲ ತಿಗಡಿ, ಪಪಂ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ, ಸದಸ್ಯರಾದ ಸುರೇಶ ಮುತ್ನಾಳ, ಮಹಾಂತೇಶ ಗಾಣಿಗೇರ, ದೊಡ್ಡಪ್ಪ ಗಣಾಚಾರಿ, ರಾಜು ಬೆಂಡಿಗೇರಿ, ಪ್ರಕಾಶ ಕೊಡ್ಲಿ, ಮಂಜುನಾಥ ಕಡಕೋಳ, ಸಮೀರ್ ಪಟೇಲ, ಪ್ರಕಾಶ ಗಿರಜಿಮನಿ, ಸಾವಿತ್ರಿ ಹೊನ್ನಣ್ಣವರ, ದಾಸ್ತಿಕೊಪ್ಪ ಗ್ರಾಪಂ ಅಧ್ಯಕ್ಷ ಉಮೇಶ ಶಿದ್ರಾಮನಿ,
    ಚಿಕ್ಕಬಾಗೇವಾಡಿ ಗ್ರಾಪಂ ಅಧ್ಯಕ್ಷ ಬಸವರಾಜ ಗಡೆನ್ನವರ, ಈರಣ್ಣಾ ವಾರದ, ಬಸವರಾಜ ಡೂಗನವರ, ಶಿವಾನಂದ ಜ್ಯೋತಿ, ಶಿವಪುತ್ರಯ್ಯ ವಿಭೂತಿಮಠ,
    ಸಮೀವುಲ್ಲಾ ಕಡೇಮನಿ, ಹರಮನಿ, ನಬುವಾಲೆ, ಸಿದ್ಧಯ್ಯ ಹಿರೇಮಠ, ಮುದ್ದಪ್ಪ ಗಣಾಚಾರಿ, ಚೇತನ ದೇಮಟ್ಟಿ, ಅಯಾಜ್ ನಬುವಾಲೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts