More

    ತ್ಯಾಗಿಗಳ ನಾಯಕತ್ವದಿಂದ ಜನಪರ ಕಾರ್ಯ

    ಬೆಳಗಾವಿ: ಸಮಾಜಕ್ಕಾಗಿ ಸ್ವಾರ್ಥ ತ್ಯಾಗ ಮಾಡಿ ಜನಪರವಾಗಿ ತಮ್ಮನ್ನು ಅರ್ಪಿಸಿಕೊಂಡವರಿಗೆ ದೇಶದ ನಾಯಕತ್ವ ನೀಡಬೇಕು ಎನ್ನುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಪಷ್ಟ ನಿದರ್ಶನ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅಭಿಪ್ರಾಯಪಟ್ಟರು.

    ಇಲ್ಲಿನ ಶಾಸ್ತ್ರೀನಗರದ ಪಟೇದಾರ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನ ಪ್ರಯುಕ್ತ ಶಾಸಕ ಅಭಯ ಪಾಟೀಲ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ ಶಾಸ್ತ್ರೀ ತಮ್ಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು. ಅವರ ಹಾದಿಯಲ್ಲಿರುವ ಮೋದಿ ಅವರು ಸಮಾಜಮುಖಿ ಹಾಗೂ ದೇಶಾಭಿವೃದ್ಧಿಯ ಕಾರ್ಯ ಸರ್ವಕಾಲಕ್ಕೂ ಅನುಕರಣೀಯ ಎಂದರು.

    ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ರಕ್ತದಾನ ಮಾಡುತ್ತಿರು ವುದು ಸಮಾಜಮುಖಿ ಕಾರ್ಯವಾ ಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡಜನತೆಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದರು.
    ಏಕ ಪಾಲಕರನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10 ಮಕ್ಕಳಿಗೆ ಶಾಸಕ ಅಭಯ ಪಾಟೀಲ ಬಟ್ಟೆ ವಿತರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಶಾಸಕ ಅಭಯ ಪಾಟೀಲ, ನಗರ ಸೇವಕರಾದ ಮಂಗೇಶ ಪವಾರ, ವಾಣಿ ಜೋಶಿ, ಸಾರಿಕಾ ಪಾಟೀಲ, ತಾಲೂಕು ಆರೋಗ್ಯ ಅಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ, ಗೀತಾ ಸುತಾರ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts