More

    ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಗೆ ಚೊಚ್ಚಲ ಪ್ರಶಸ್ತಿ

    ಹುಬ್ಬಳ್ಳಿ: ನಗರದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯ ಎ ತಂಡ ಕೆಎಸ್​ಸಿಎ ಧಾರವಾಡ ವಲಯದ ನಾಲ್ಕನೇ ಡಿವಿಜನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

    ಬೆಳಗಾವಿಯ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಳಗಾವಿಯ ಅರ್ಜುನ ಸ್ಪೋರ್ಟ್ಸ್ ಕ್ಲಬ್ ಎ ತಂಡವನ್ನು ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯ ಎ ತಂಡ ಸೋಲಿಸಿತು. ಅರ್ಜುನ ಸ್ಪೋರ್ಟ್ಸ್ ಕ್ಲಬ್ 30 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ತಂಡ 12.4 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ಆರಂಭಿಕ ಆಟಗಾರ ಲೋಚನ್​ಗೌಡ ಅಜೇಯ 94ರನ್ ಕಲೆಹಾಕಿ ಗೆಲುವಿನ ದಡ ಸೇರಿಸಿದರು. ಆಕಾಶ ಸಾಲಿಮಠ ಅಜೇಯ 25ರನ್ ಗಳಿಸಿದರು. ಈ ಎರಡೂ ತಂಡಗಳು ಕೆಎಸ್​ಸಿಎ ಧಾರವಾಡ ವಲಯದ ಮೂರನೇ ಡಿವಿಜನ್ ಟೂರ್ನಿಗೆ ಅರ್ಹತೆ ಪಡೆದವು.

    ಸೆಮಿಫೈನಲ್​ನಲ್ಲಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯು ಸಿಸಿಐ ವಿರುದ್ಧ 117 ರನ್​ಗಳಿಂದ ಮತ್ತು ಅರ್ಜುನ ಸ್ಪೋರ್ಟ್ಸ್ ಕ್ಲಬ್ ತಂಡವು ಹುಬ್ಬಳ್ಳಿಯ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ತಂಡದ ವಿರುದ್ಧ 24ರನ್​ಗಳಿಂದ ಗೆಲುವು ಸಾಧಿಸಿ ಅಂತಿಮ ಹಂತ ತಲುಪಿದ್ದವು. ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ, ರಣಜಿ ಮಾಜಿ ಆಟಗಾರ ಸೋಮಶೇಖರ ಸಿರಗುಪ್ಪಿ ಪಂದ್ಯದಲ್ಲಿ ಆಡಿ 6 ಓವರ್ ಬೌಲಿಂಗ್ ಮಾಡಿ 2 ವಿಕೆಟ್​ಗಳನ್ನು ಪಡೆದರು. ತಂಡದ ಪರವಾಗಿ ವಿನಯ್ ಎಲ್. 3 ವಿಕೆಟ್ ಕಬಳಿಸಿದರು.

    ವಲಯ ನಿಯಂತ್ರಕ ಅವಿನಾಶ ಪೋತದಾರ, ದಯಾನಂದ ಶೆಟ್ಟಿ, ವಿಜಯಲಕ್ಷ್ಮೀ ಶಿರಗುಪ್ಪಿ, ವೇಮರಡ್ಡಿ ಪಾಟೀಲ, ಮಹೇಶ ಗೌಡ, ಕೃಷ್ಣಾ ರಾಯರಡ್ಡಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts