More

    ತೆಲಂಗಾಣ ಸರ್ಕಾರದ ಬೇಡಿಕೆಗೆ ಖಂಡನೆ

    ವಿಜಯಪುರ: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರದ ಬೇಡಿಕೆ ಖಂಡಿಸಿ ಜಿಲ್ಲೆಯ ರೈತ ಮುಖಂಡರು ಮಂಗಳವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಕೃಷ್ಣಾ ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಮಹಾರಾಷ್ಟ್ರಕ್ಕೆ 660 ಟಿಎಂಸಿ, ಆಂಧ್ರಪ್ರದೇಶಕ್ಕೆ 1009 ಟಿಎಂಸಿ ನೀರು ಹಂಚಿಕೆಯಾಗಿದ್ದು, ಜಿಲ್ಲೆಗೂ ನೀರಿನ ಪ್ರಮಾಣ ಹಂಚಿಕೆಯಾಗಿದೆ. ಆದರೆ, ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ತೆಲಂಗಾಣ ಸರ್ಕಾರ ಪ್ರತ್ಯೇಕವಾಗಿ ನೀರಿಗೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ. ಅಖಂಡ ಆಂಧ್ರಪ್ರದೇಶಕ್ಕೆ ಹಂಚಿಕೆಯಾದ ನೀರಿನ ಪ್ರಮಾಣದಲ್ಲೇ ಎರಡೂ ರಾಜ್ಯಗಳು ಹಂಚಿಕೆ ಮಾಡಿಕೊಳ್ಳಬೇಕೆಂದು ರೈತರು ಒತ್ತಾಯಿಸಿದರು.
    ಮುಖಂಡರಾದ ಭೀಮಶಿ ಕಲಾದಗಿ, ಈರಣ್ಣ ಬೆಳ್ಳುಂಡಗಿ, ಅರವಿಂದ ಕುಲಕರ್ಣಿ, ರಾಜು ರಣದೇವಿ, ಸಿದರಾಯ ಬಂಗಾರಿ, ಪಾಂಡು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts