More

    ತೆರಿಗೆ ಪಾವತಿಸದ ವಾಣಿಜ್ಯ ಸಂಕೀರ್ಣಕ್ಕೆ ಬೀಗ

    ಬಂಕಾಪುರ: ಲಕ್ಷಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಸಂಕೀರ್ಣಕ್ಕೆ ಪುರಸಭೆ ಅಧಿಕಾರಿಗಳ ತಂಡ ಸೋಮವಾರ ಬೀಗ ಜಡಿದಿದೆ.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರಿನ ವಾಣಿಜ್ಯ ಸಂಕೀರ್ಣದ ಮಾಲೀಕ ಮಹಮ್ಮದಹುಸೇನ್ ಖತೀಬ ಕಳೆದ 14 ವರ್ಷಗಳಿಂದ ತೆರಿಗೆ ಕಟ್ಟಿರಲಿಲ್ಲ. ಇದರಿಂದ ತೆರಿಗೆ ವಸೂಲಿಗಾಗಿ ಅಲೆದಾಡಿ ಸುಸ್ತಾಗಿದ್ದ ಅಧಿಕಾರಿಗಳು, ಸೋಮವಾರ ತೆರಿಗೆ ವಸೂಲಿಗೆ ಬಂದಿದ್ದ ವೇಳೆ ತೆರಿಗೆ ತುಂಬದ ಕಾರಣ ವಾಣಿಜ್ಯ ಸಂಕೀರ್ಣದಲ್ಲಿನ ಎಲ್ಲ ಏಳು ಅಂಗಡಿಗಳಿಗೆ ಅಧಿಕಾರಿಗಳು ಬೀಗ ಹಾಕಿ ವಸೂಲಿಗೆ ಮುಂದಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಅಂದಾಜು 73.15 ಲಕ್ಷ ರೂ. ತೆರಿಗೆ ಬಾಕಿ ಇರುವುದರಿಂದ ಪುರಸಭೆಯ ಕಾರ್ವಿುಕರಿಗೆ ವೇತನ ಸೇರಿದಂತೆ ಪುರಸಭೆ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಅತಿ ಹೆಚ್ಚು ತೆರಿಗೆ ಬಾಕಿದಾರರಿಂದ ವಸೂಲಿಗಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದರು.

    ಕಂದಾಯ ನಿರೀಕ್ಷಕ ಎಂ. ತಿಪ್ಪೆಸ್ವಾಮಿ, ಸಿಬ್ಬಂದಿ ಬಿ.ಎಚ್. ಕೆರೆಕಲ್, ಮಲ್ಲಮ್ಮ ಹರವಿ, ನಿರ್ಮಲಾ ಗುಡಿಮನಿ, ಪರಶುರಾಮ ಹೆಬ್ಬಾರ, ನಿಂಗಪ್ಪ ಹೊಸಮನಿ, ನೀಲಪ್ಪ ಚಿನ್ನಗೌಡ್ರ, ಯಲ್ಲಪ್ಪ ಮಾದರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts