More

    ತೃಪ್ತಿ-ಮಾನವೀಯತೆ ಮರೆತರೆ ಆತಂಕ ಅಚಲ- ಸಂತೋಷ್ ಹೆಗ್ಡೆ

    ದಾವಣಗೆರೆ: ಪ್ರತಿಯೊಬ್ಬರೂ ತೃಪ್ತಿ-ಮಾನವೀಯತೆ ಎರಡೂ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ-ಸೌಹಾರ್ದ ಇರಲಿದೆ. ಇಲ್ಲವಾದಲ್ಲಿ ಜೀವನದಲ್ಲಿ ದೊಡ್ಡ ಆತಂಕ ಬಂದೇ ಬರುತ್ತದೆ ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ ಹೇಳಿದರು.
    ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಗಂಗಾ ವಿದ್ಯಾಸಂಸ್ಥೆ 53ನೇ ವಾರ್ಷಿಕ ಸಂಭ್ರಮದ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಒಂದು ಹಂತದವರೆಗೆ ಓದುವುದು, ಅದರಿಂದ ಕೆಲಸ ಸಿಕ್ಕರೆ ತಮ್ಮಷ್ಟಕ್ಕೆ ಇದ್ದರಾಯಿತು, ಕೆಲಸ ಸಿಗದಿದ್ದಾಗ ಸನ್ಯಾಸಿಯಾಗುವುದು ತೃಪ್ತಿಯಲ್ಲ. ಹೆಚ್ಚು ಹುದ್ದೆ ಓದಿ ದೊಡ್ಡ ಹುದೆಗೇರುವ ಆಕಾಂಕ್ಷೆ ಇರಬೇಕು. ಆ ಮೂಲಕ ಶ್ರೀಮಂತರಾಗುವುದು ತಪ್ಪಲ್ಲ. ಇನ್ನೊಬ್ಬರ ಜೇಬಿಗೆ, ಮತ್ತೊಬ್ಬರ ಹೊಟ್ಟೆಗೆ ಕೈ ಹಾಕಿ ಸಿರಿವಂತರಾಗಬೇಕಿಲ್ಲ ಎಂದರು.
    ದುರಾಸೆ ಎಂಬುದು ನಮ್ಮ ದೇಶದಲ್ಲಿ ಅಭಿವೃದ್ಧಿಯಾಗಿರುವ ರೋಗವಾಗಿದೆ. ಇದು ಒಂದು ಗುಂಪಿಗೆ ಸೀಮಿತವಾಗಿಲ್ಲ. ಕ್ಯಾನ್ಸರ್, ಕ್ಷಯ, ಕೋವಿಡ್‌ಗೆ ಮದ್ದಿಗೆ ಆದರೆ ದುರಾಸೆಗೆ ಯಾವುದೇ ಔಷಧವಿಲ್ಲ. ಸಮಾಜದಲ್ಲಿ ನಿರಂತರ ಅನ್ಯಾಯ ನಡೆಯುತ್ತ ಹೋದರೆ ಶಾಂತಿ-ಸೌಹಾರ್ದವಿರಲು ಸಾಧ್ಯವಿಲ್ಲ. ಸಮಾಜದ ಭಾವನೆ ಬದಲಾಯಿಸುವ ಮತ್ತು ಭ್ರಷ್ಟರನ್ನು ತಿರಸ್ಕರಿಸುವ ಕೆಲಸ ಮಾಡಬೇಕು. ಇದಕ್ಕೆ ಯುವಕರು ಮನಸ್ಸು ಮಾಡಬೇಕು ಎಂದು ಹೇಳಿದರು.
    ಜೀಪ್ ಹಗರಣದಿಂದ ಕಲ್ಲಿದ್ದಲು ಹಗರಣಗಳವರೆಗೆ ಉದಾಹರಣೆ ನೀಡಿದ ಸಂತೋಷ್ ಹೆಗ್ಡೆ, ಸರ್ಕಾರ 1 ರೂ. ಅಭಿವೃದ್ಧಿಗೆ ನೀಡಿದರೆ ಕೊನೆ ಹಂತಕ್ಕೆ 15 ಪೈಸೆ ಮಾತ್ರ ತಲುಪಲಿದೆ ಎಂದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಬಹಿರಂಗವಾಗಿ ಹೇಳಿದ್ದರು. 2023ರ ಇಂದಿನ ಕಾಲಘಟ್ಟದಲ್ಲಿ 100 ರೂ. ನೀಡಿದರೆ 15 ಪೈಸೆಯಷ್ಟೇ ಕಡೆ ಹಂತಕ್ಕೆ ತಲುಪುತ್ತಿದೆ ಎಂದು ವಿಷಾದಿಸಿದರು.
    ವಿದ್ಯಾರ್ಥಿನಿ ಅನುಷಾ ಗ್ರೇಸ್ ಡಿ. ಚಿಂದವಾಳ್ ಹಾಗೂ ವಿಜೇತ ಬಸವರಾಜ್ ಮುತ್ತಗಿ ಅವರಿಗೆ ಬಿ. ನಾಗರಾಜ್ ಸ್ಮಾರಕ ಪ್ರತಿಭಾ ಪ್ರಶಸ್ತಿ, ಪ್ರಣವ್ ಎನ್. ಬಾಗೂರ್, ಕೆ.ಎಲ್. ವರ್ಷಿತಾ ಇತರರಿಗೆ ಜಿ.ಎಸ್. ಶಿವಶಂಕರರಾವ್ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುನ ಪ್ರತಿಭಾವಂತರನ್ನು ಗೌರವಿಸಲಾಯಿತು.
    ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಪಪೂ ಕಾಲೇಜು ಪ್ರಾಚಾರ್ಯ ಜಿ.ಸಿ.ನಿರಂಜನ್, ಶೈಕ್ಷಣಿಕ ಮುಖ್ಯಸ್ಥ ಎಲ್.ವಿ. ಸುಬ್ರಹ್ಮಣ್ಯ, ಹಿರಿಯ ಉಪನ್ಯಾಸಕ ಆರ್.ಎಸ್. ಗಣೇಶ ಪ್ರಸಾದ್, ವಾಣಿಶ್ರೀ, ಕೆ.ಎಸ್. ರೇಖಾರಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts