More

    ತುಕ್ಕು ಹಿಡಿದ ವಾರ್ ಶಿಪ್ ಮ್ಯೂಸಿಯಂ

    ಕಾರವಾರ: ಕರೊನಾ ಲಾಕ್​ಡೌನ್​ನಿಂದ ಬಂದಾಗಿರುವ ನಗರದ ಪ್ರವಾಸಿ ತಾಣಗಳ ಪರಿಸ್ಥಿತಿ ಶೋಚನೀಯವಾಗಿದೆ. ಕಳೆದ ಮಾರ್ಚ್ 23 ರಿಂದ ರಾಕ್ ಗಾರ್ಡನ್, ಚಪಲ್ ವಾರ್ ಶಿಪ್ ಮ್ಯೂಸಿಯಂ, ಕಡಲ ತೀರದ ಪಕ್ಕದ ಉದ್ಯಾನ ಮುಂತಾದ ಪ್ರವಾಸಿ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದುವರೆಗೂ ತೆರೆದುಕೊಂಡಿಲ್ಲ. ಆದರೆ, ಅವುಗಳು ನಿರ್ವಹಣೆ, ಜನ ಓಡಾಟ ಇಲ್ಲದೇ ಸಂಪೂರ್ಣ ಪಾಳು ಕೊಂಪೆಯಂತಾಗುತ್ತಿವೆ.

    ಚಪಲ್ ವಾರ್ ಶಿಪ್ ಮ್ಯೂಸಿಯಂನ ಒಳಗೆ ಸಂಪೂರ್ಣ ಸೋರುತ್ತಿದೆ. ಎಲ್ಲೆಡೆ ತುಕ್ಕು ಹಿಡಿದು ಹೋಗಿದೆ. ಯುದ್ಧ ಸಾಮಗ್ರಿಗಳು ಮಸುಬಾಗುತ್ತಿವೆ. ಎದುರಿನ ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದಿವೆ. ರಾಕ್ ಗಾರ್ಡನ್​ನಲ್ಲೂ ಇದೇ ಪರಿಸ್ಥಿತಿ ಅಲ್ಲಿಯೂ ಪ್ರತಿಮೆಗಳ ಬಣ್ಣಗೆಟ್ಟು ಹೋಗುತ್ತಿವೆ. ಬೆಳೆದ ಗಿಡ ಗಂಟಿಗಳನ್ನು ಸ್ವಚ್ಛ ಮಾಡುವ ಕಾರ್ಯವನ್ನು ಗುತ್ತಿಗೆ ಸಂಸ್ಥೆ ನಡೆಸಿದೆ. ಕಡಲ ತೀರದ ಪಕ್ಕದಲ್ಲಿರುವ ನಗರಸಭೆ ಉದ್ಯಾನವೂ ಇದಕ್ಕೆ ಹೊರತಾಗಿಲ್ಲ. ಆಳೆತ್ತರ ಹುಲ್ಲು ಬೆಳೆದಿದೆ. ಮಕ್ಕಳ ಆಟಿಕೆಗಳು ಮುರಿದು ಬೀಳುವ ಹಂತದಲ್ಲಿವೆ.

    ಜಿಲ್ಲೆಯಲ್ಲಿ ಇನ್ನೂ ಕರೊನಾ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಪ್ರವಾಸಿ ತಾಣಗಳನ್ನು ತೆರೆದಿಲ್ಲ. ಅವುಗಳನ್ನು ತೆರೆಯುವ ಹೊತ್ತಿಗೆ ಎಲ್ಲವನ್ನೂ ಸರಿಪಡಿಸಲಿದ್ದೇವೆ.

    | ಡಾ. ಹರೀಶ ಕುಮಾರ ಕೆ.ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಕೆಟ್ಟು ನಿಂತ ಯಂತ್ರ

    ಟ್ಯಾಗೋರ್ ಕಡಲ ತೀರಕ್ಕೆ ಕೆಲ ದಿನಗಳಿಂದ ದಿನವೂ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ತೀರ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಕಡಲ ತೀರ ಸ್ವಚ್ಛತೆಗಾಗಿ ಜಿಲ್ಲಾ ಪ್ರವಾಸಿ ತಾಣಗಳ ಅಭಿವೃದ್ಧಿ ಸಮಿತಿ ತಂದ ಯಂತ್ರ ಕೆಟ್ಟು ನಿಂತು ಆರು ತಿಂಗಳು ಕಳೆದಿದೆ. ಲಾಕ್​ಡೌನ್ ಕಾರಣ ರಿಪೇರಿಗೆ ವಿಳಂಬವಾಗಿತ್ತು. ಈಗ ಅಂತೂ ರಿಪೇರಿಯಾಗಿದೆ ಎಂಬ ಮಾಹಿತಿ ಇದ್ದರೂ ಸ್ವಚ್ಛತಾ ಕಾರ್ಯ ಮಾತ್ರ ಪ್ರಾರಂಭವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts