More

    ತುಂಬಿ ಹರಿದ 150 ಕೆರೆಗಳು

    ಮುಳಬಾಗಿಲು: ತಾಲೂಕಿನಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವುದರಿಂದ ಸುವಾರು 591 ಕೆರೆಗಳಲ್ಲಿ 150 ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

    ಪ್ರತಿವರ್ಷ ಅಕ್ಟೋಬರ್‌ಗೆ 639 ಮಿಮೀ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಏಪ್ರಿಲ್‌ನಿಂದ ಅಕ್ಟೋಬರ್ 19ರವರೆಗೆ 900 ಮಿಮೀ ಮಳೆಯಾಗಿದೆ. ಏಪ್ರಿಲ್‌ನಿಂದ ಇದುವರೆಗೂ 40 ದಿನಗಳು ಮಳೆಯಾಗಿದೆ.

    ತಾಲೂಕಿನಲ್ಲಿ ಒಟ್ಟು 591 ಕೆರೆಗಳು ಇದ್ದು, 150 ಕೆರೆಗಳಲ್ಲಿ ನೀರು ತುಂಬಿ ಕೋಡಿ ಹರಿದಿದ್ದರೆ ಉಳಿದ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ನೀರಾವರಿ ಇಲಾಖೆಗೆ ಸೇರಿದ ದೊಡ್ಡ ಕೆರೆಗಳು ತುಂಬಲು ಇನ್ನೂ ಕೆಲ ದಿನ ಮಳೆ ಸುರಿಯಬೇಕು. ರಾಜಕಾಲುವೆ ಒತ್ತುವರಿಯಾಗಿರುವ ಜಾಗಗಳಲ್ಲಿ ಕೆರೆಗಳಿಗೆ ಹೆಚ್ಚು ನೀರು ಹರಿಯದೆ ವ್ಯರ್ಥವಾಗುತ್ತಿರುವುದು ಕಂಡು ಬರುತ್ತಿದೆ.

    ಅಂತರ್ಜಲಮಟ್ಟ ಏರಿಕೆ: ಈ ಬಾರಿ ಉತ್ತಮ ಮಳೆ ಬೀಳುತ್ತಿರುವುದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಜಾನುವಾರು ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ನೀರು ಲಭ್ಯವಾಗುತ್ತಿದೆ. ಮಳೆ ಬೀಳುತ್ತಿರುವುದರಿಂದ ಹಸಿರು ಮೇವು ದೊರೆಯುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಕೋಡಿ ಹೋಗಿರುವ ಕೆರೆಗಳಿಗೆ ಗ್ರಾಮಸ್ಥರು ದೀಪೋತ್ಸವ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts