More

    ತುಂಬಿ ಹರಿದ ಗುಂಡಬಾಳ ನದಿ

    ವಿಜಯವಾಣಿ ಸುದ್ದಿಜಾಲ ಹೊನ್ನಾವರ

    ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಗುಂಡಬಾಳ ನದಿ ಸೋಮವಾರ ತುಂಬಿ ಹರಿಯಿತು. ಇದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ಪರದಾಡುವಂತಾಯಿತು.

    ಘಟ್ಟದ ಮೇಲ್ಭಾಗವಾದ ಸಿದ್ದಾಪುರ ತಾಲೂಕಿನಲ್ಲಿ ತೀವ್ರ ಮಳೆಯಾಗಿದ್ದು, ಅಲ್ಲಿನ ನೀರು ಗುಂಡಬಾಳ ನದಿ ಸೇರಿ ಹರಿವು ಹೆಚ್ಚಾಗಿದೆ. ಭಾನುವಾರ ತಡರಾತ್ರಿ ನೀರಿನ ಮಟ್ಟ ಒಮ್ಮಿಂದೊಮ್ಮೆಲೇ ಏರಿ ಮತ್ತೆ ನೆರೆ ಹಾವಳಿ ಉಂಟಾಗಿದೆ. ಕೆಲವು ದಿನದ ಹಿಂದೆ ಕಾಳಜಿ ಕೇಂದ್ರದಿಂದ ಮನೆಗೆ ಬಂದು ಸಹಜ ಸ್ಥಿತಿಗೆ ಮರಳುವಷ್ಟರಲ್ಲಿ ಮತ್ತೆ ಸುರಿದ ಮಳೆಯಿಂದಾಗಿ ಚಿಕ್ಕನಕೋಡ ಗ್ರಾಮದ ಜನರು ಕಾಳಜಿ ಕೇಂದ್ರಕ್ಕೆ ತೆರಳಿದ್ದಾರೆ.

    ಗುಂಡಬಾಳ ನದಿ ತೀರದ ಚಿಕ್ಕನಕೋಡ ಗ್ರಾಪಂ ವ್ಯಾಪ್ತಿಯ ಗುಂಡಿಬೈಲ್, ಚಿಕ್ಕನಕೋಡ, ಗುಂಡಬಾಳ, ಹೆಬೈಲ್ ಗ್ರಾಮದಲ್ಲಿ ಗುಂಡಬಾಳ ನದಿಯ ನೀರು ಆವರಿಸುತ್ತಿದೆ. ಹಡಿನಬಾಳ, ಹಾಡಗೇರಿ, ಹುಡಗೋಡ ಹಾಗೂ ಖರ್ವಾ ಗ್ರಾಪಂ ವ್ಯಾಪ್ತಿಯ ನಾಥಗೇರಿ, ಕಡಗೇರಿ, ಕೂಡ್ಲ ತಗ್ಗು ಪ್ರದೇಶದಲ್ಲಿನ ತೋಟ, ಗದ್ದೆ, ಮನೆಗಳಿಗೆ ನೀರು ಆವರಿಸಿದೆ.

    ಚಿಕ್ಕನಕೋಡನ ಹರಿಜನ ಕೇರಿ ಹಾಗೂ ಕ್ರಿಶ್ಚಿಯನ್ ಕೇರಿಗಳ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದ್ದು, 20ಕ್ಕೂ ಅಧಿಕ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಂದಾಯ, ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ನದಿಯಲ್ಲಿ ನೀರಿನ ಮಟ್ಟ ತಗ್ಗುತ್ತಿರುವ ದೃಶ್ಯ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts