More

    ತೀರ್ಥಂಕರರ ಸಂದೇಶಗಳು ಪ್ರಸ್ತುತ

    ಹಾನಗಲ್ಲ: 6ನೇ ಶತಮಾನದಲ್ಲಿ ಪ್ರಾರಂಭಗೊಂಡ ಜೈನ ಧರ್ಮದ ತೀರ್ಥಂಕರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಮಹಾವೀರ ಜಯಂತಿಯಲ್ಲಿ ಮಹಾವೀರ ಭಗವಾನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ಪ್ರಾಣಿ, ಪಕ್ಷಿ, ಸರೀಸೃಪಗಳನ್ನು ತಿನ್ನುವುದರಿಂದಲೇ ನಮ್ಮ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದೇವೆ. ಸರಳ ಜೀವನ ಪದ್ಧತಿ, ಅಹಿಂಸಾ ಧರ್ಮ ಪಾಲನೆಗಳಿಂದ ಸಮಾಜದಲ್ಲಿ ಸದ್ಭಾವನೆಗಳು ಬೆಳೆಯುತ್ತವೆ ಎಂದರು.

    ಇದೇ ಸಂದರ್ಭದಲ್ಲಿ ತಾಲೂಕಿನ ಜೈನ ಸಮುದಾಯ ವತಿಯಿಂದ ಮಹಾವೀರ ಜಯಂತಿ ಅಂಗವಾಗಿ ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10,108 ರೂ. ಚೆಕ್ ಅನ್ನು ತಹಸೀಲ್ದಾರರಿಗೆ ಹಸ್ತಾಂತರಿಸಿದರು.

    ದಿಗಂಬರ ಜೈನ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ರಮೇಶ ಕಳಸೂರ, ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ಕಾನಣ್ಣನವರ, ಪದಾಧಿಕಾರಿಗಳಾದ ಅಜಿತ ಕಂಚಿನಕೋಟಿ, ಸಂತೋಷ ಲಾಡರ್, ಅರಿಹಂತ ದುಂಡಣ್ಣನವರ, ಸಮ್ಮೇದ ಕಂಚಿನಕೋಟಿ, ದರ್ಶನ ಕಂಚಿನಕೋಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts