More

    ತಿಳವಳ್ಳಿ ತಾಪಂ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ

    ಹಾನಗಲ್ಲ: ತಾಲೂಕಿನ ತಿಳವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫಯಾಜ್​ಅಹ್ಮದ್ ನಜೀರಹ್ಮದ್ ಲೋಹಾರ 761 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ತಿಳವಳ್ಳಿ ತಾಪಂ ಕ್ಷೇತ್ರದ 8 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2606 ಪುರುಷರು, 2411 ಮಹಿಳಾ ಮತದಾರರು ಸೇರಿ ಒಟ್ಟು 5017 ಜನ ಮತ ಚಲಾಯಿಸಿದ್ದರು. ಇದರಲ್ಲಿ 54 ನೋಟಾ ಮತ ಚಲಾವಣೆಯಾಗಿದ್ದವು. ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ತಿಳವಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಫಯಾಜ್​ಅಹ್ಮದ್ ನಜೀರಹ್ಮದ್ ಲೋಹಾರ 2862 ಮತ ಹಾಗೂ ಬಿಜೆಪಿ ಅಭ್ಯರ್ಥಿ ಅಬ್ದುಲ್​ರೆಹಮಾನ್ ಸೈಯ್ಯದ್​ಸಾಬ ಸವಣೂರ 2101 ಮತ ಪಡೆದರು.

    ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಈ ಹಿಂದೆ ಎಂ.ಎಚ್. ಲೋಹಾರ ಆಯ್ಕೆಯಾಗಿದ್ದರು. ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್ ಎಂ.ಎಚ್. ಲೋಹಾರ ಅವರ ಪುತ್ರ ಫಯಾಜ್​ಅಹ್ಮದ್ ಲೋಹಾರಗೆ ಟಿಕೆಟ್ ನೀಡಿತ್ತು.

    ವಿಜಯೋತ್ಸವ: ತಿಳವಳ್ಳಿ ತಾಪಂ ಕ್ಷೇತ್ರದಲ್ಲಿ ಅಭ್ಯರ್ಥಿ ಫಯಾಜ್​ಅಹ್ಮದ್ ಲೋಹಾರ ಅವರು ಗೆಲುವು ಸಾಧಿಸಿದ ನಿಮಿತ್ತ ಸಂಜೆ ವಿಜಯೋತ್ಸವ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎಸ್. ಪಾಟೀಲ, ಮಂಜು ನೀಲಗುಂದ, ಎಂ.ಎಂ. ಮುಲ್ಲಾ, ದಾನಪ್ಪ ಗಂಟೇರ, ಬಸವರಾಜ ಹಾದಿಮನಿ, ಎಂ.ಎಸ್. ಉಪ್ಪುಣಸಿ, ಜಹೀರ ಹಂಚಿನಮನಿ, ಆಸಿಫ್ ಲೋಹಾರ, ರಾಜು ಹರಿಜನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts