More

    ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ, ಸರ್ಕಾರಕ್ಕೂ ಮೊದಲೇ ವಿವಿ ನಿರ್ಧಾರ ಪ್ರಕಟ, ವೇಳಾಪಟ್ಟಿ ಹಿಂಪಡೆಯಲು ಒತ್ತಾಯ, ಜೂ.28 ರಂದು ಆಗ್ರಹ ದಿನ ಆಚರಣೆ

    ವಿಜಯಪುರ: ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆ ನಡೆಸಬೇಕಾ? ಬೇಡವಾ? ಎಂಬ ಸರ್ಕಾರದ ನಿರ್ಧಾರಕ್ಕೂ ಮೊದಲೇ ವಿಶ್ವ ವಿದ್ಯಾಲಯಗಳು ವೇಳಾ ಪಟ್ಟಿ ಪ್ರಕಟಿಸಿರುವ ಕ್ರಮ ಖಂಡಿಸಿ ಜೂ. 28 ರಂದು ‘ಆಗ್ರಹ ದಿನ’ ಆಚರಿಸುತ್ತಿರುವ ಎಐಡಿಎಸ್‌ಒ, ಪತ್ರ ಚಳುವಳಿ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.
    ತಿಂಗಳಲ್ಲೇ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ಕೆಲವು ವಿಶ್ವ ವಿದ್ಯಾಲಯಗಳು ಮುಂದಾಗಿವೆ. ಈಗಾಗಲೇ ರಾಜ್ಯಾದ್ಯಂತ ಹೋರಾಟ ನಡೆಸಿ ಮುಂದೂಡಲ್ಪಟ್ಟ ಹಿಂದಿನ ಪರೀಕ್ಷೆ ರದ್ದುಗೊಳಿಸಿ ಮುಂದಿನ ಸೆಮಿಸ್ಟರ್‌ಗಳ ಪರೀಕ್ಷೆಯಾದರೂ ಸಮರ್ಪಕವಾಗಿ ನಡೆಸಲು ಆಗ್ರಹಿಸಲಾಗಿದೆ. ರಾಜ್ಯಾದ್ಯಂತ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದ 46 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ ಶೇ. 91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎಂದಿದ್ದಾರೆ. ಆದರೂ ವಿಶ್ವ ವಿದ್ಯಾಲಯಗಳು ವೇಳಾ ಪಟ್ಟಿ ಪ್ರಕಟಿಸಿದೆ. ಇದನ್ನು ಖಂಡಿಸಿ ಹೋರಾಟದ ಜೊತೆ ಪತ್ರ ಚಳುವಳಿ ಹಮ್ಮಿಕೊಂಡಿದ್ದಾಗಿ ಸಂಘಟನೆ ಸದಸ್ಯೆ ತೇಜಸ್ವಿನಿ ತಿಳಿಸಿದ್ದಾರೆ.
    ಬೇಡಿಕೆಗಳು:
    ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್ (ಬೆಸ ಸಂಖ್ಯೆಯ) ಪರೀಕ್ಷೆಗಳನ್ನು ನಡೆಸಬಾರದು. ಎಲ್ಲ ವಿದ್ಯಾರ್ಥಿಗಳಿಗೂ ಎರಡು ಡೋಸ್ ಕರೊನಾ ಲಸಿಕೆ ಉಚಿತವಾಗಿ ನೀಡುವವರೆಗೂ ಆಫ್‌ಲೈನ್ ತರಗತಿ ಆರಂಭಿಸಬಾರದು. ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವ ನಿರ್ಧಾರ ಅವೈಜ್ಞಾನಿಕವಾಗಿದ್ದು ಕೈಬಿಡಬೇಕು ಎಂಬ ಬೇಡಿಕೆಗಳೊಂದಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ವಿದ್ಯಾರ್ಥಿಗಳು ಹತ್ತಿರದ ಅಂಚೆಕಚೇರಿಗೆ ತೆರಳಿ ಆಯಾ ವಿಶ್ವ ವಿದ್ಯಾಲಯಗಳ ಕುಲಪತಿ ಹಾಗೂ ಕಾಲೇಜ್ ಪ್ರಾಂಶುಪಾಲರಿಗೆ ಪತ್ರ ಬರೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts