More

    ತಾಲೂಕು ಆಡಳಿತ ಜಾಗೃತಿ ಜಾಥಾ

    ಕೊಳ್ಳೇಗಾಲ: ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಭಾನುವಾರ ಮತಗಟ್ಟೆ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.

    ಎಸ್.ವಿ.ಕೆ.ಬಾಲಕಿಯರ ಕಾಲೇಜು ಆವರಣದಲ್ಲಿ ಜಾಥಾಕ್ಕೆ ಉಪವಿಭಾಗಾಧಿಕಾರಿ ಗೀತಾ ಹುಡೇದ ಚಾಲನೆ ನೀಡಿದರು. ಮತದಾರರು ಮತದಾನ ಮಾಡಲು ಸುಲಭಗೊಳಿಸುವ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ. ಮತದಾರರ ಮನೆಮನೆಗೆ ತೆರಳಿ ಕ್ರಮ ಸಂಖ್ಯೆ, ಬೂತ್ ಸಂಖ್ಯೆ, ಮತಗಟ್ಟೆ ಸಂಖ್ಯೆ, ಮತದಾನ ಸ್ಥಳದ ಮಾಹಿತಿ ಇರುವ ಚೀಟಿಗಳನ್ನು ಹಂಚಿಕೆ ಮಾಡುವಂತೆ ಗೀತಾ ಹುಡೇದ ತಿಳಿಸಿದರು.

    ಪ್ರಜಾಪ್ರಭುತ್ವ ಗೆಲ್ಲಿಸಲು ಶೇ.100 ರಷ್ಟು ಮತದಾನ ಮಾಡಿಸಬೇಕು. ಹಿಂದಿನ ಚುನಾವಣೆಯಲ್ಲಿ ಮತದಾರರಿಗೆ ಜಾಗೃತಿ ಕೊರತೆಯಿಂದಾಗಿ ಶೇ.70 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನದಂತೆ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಶೇ.100 ರಷ್ಟು ಮತದಾನವಾಗಬೇಕು ಎಂದರು.

    ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ. 10 ದಿನಗಳ ಮುನ್ನವೇ ಮತದಾರರ ವಿವರವುಳ್ಳ ಚೀಟಿ ತಲುಪಿಸಬೇಕು. ಮತದಾರರಿಗೆ ಆಸೆ, ಆಮಿಷ ನೀಡುವುದು ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರೆ, ತಕ್ಷಣ ಅಂತವರ ವಿರುದ್ಧ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ಸಿಡಿಪಿಒ ನಾಗೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts