More

    ತಾರಫೈಲ್ ಬಡಾವಣೆಗೆ ಪಾಂಡ್ವೆ ಭೇಟಿ

    ಕಲಬುರಗಿ: ನಗರದ ತಾರಫೈಲ್ ಬಡಾವಣೆ ಸೇರಿ ವಿವಿಧೆಡೆ ಮಂಗಳವಾರ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸ್ವಚ್ಛತೆ ಪರಿಶೀಲಿಸಿದರು.
    ತಾರಫೈಲ್ ಬಡಾವಣೆಯ ಹಲವೆಡೆ ಸಾರ್ವಜನಿಕ ಶೌಚಾಲಯದ ಎದುರು ಕಸದ ರಾಶಿ ಬಿದ್ದು, ಹಂದಿಗಳ ಕಾಟ ಹೆಚ್ಚಾಗಿದೆ. ಈ ಕಸವನ್ನು ಹಂದಿಗಳು ಕೆದರಿ ಹೊಲಸು ಮಾಡುತ್ತಿವೆ. ಕೋವಿಡ್-19 ಈ ಸಂದರ್ಭದಲ್ಲಿ ಬಡಾವಣೆ ನಾಗರಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ವಿಜಯವಾಣಿ ವರದಿ ಮಾಡಿತ್ತು. ವರದಿ ಗಮನಿಸಿದ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ತಕ್ಷಣ ಕೈಗೆತ್ತಿಕೊಳ್ಳಬೇಕು, ಕಸವನ್ನು ಶೀಘ್ರ ಎತ್ತಂಗಡಿ ಮಾಡಬೇಕು ಎಂದು ಪಾಲಿಕೆ ಸಿಬ್ಬಂದಿ ಸೂಚಿಸಿದರು.
    ಬಡಾವಣೆಯ ಸ್ವಚ್ಛತೆ, ಉದ್ಯಾನವನಗಳ ನಿರ್ವಹಣೆ ಕುರಿತು ಬಡಾವಣೆಯ ನಾಗರಿಕರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು.
    ನಗರದ ಕೆ.ಎ.ಬಿ. ಕಾಲನಿ, ಹೌಸಿಂಗ್ ಬೋರ್ಡ್​ ಕಾಲನಿ ಹಾಗೂ ಅಕ್ಕಮಹಾದೇವಿ ಕಾಲನಿಗಳಲ್ಲಿರುವ ಉದ್ಯಾನವನಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಬಡಾವಣೆಯ ನಾಗರಿಕರು, ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts