More

    ತಾರತಮ್ಯ ಹೋಗಲಾಡಿಸಲು ಕೀರ್ತನೆ ಪ್ರೇರಕ ಶಕ್ತಿ

    ಶಾಸಕ ಎನ್.ಮಹೇಶ್ ಅಭಿಮತ


    ಕೊಳ್ಳೇಗಾಲ: ಸಮಾಜದಲ್ಲಿರುವ ಮೇಲು-ಕೀಳು ಭಾವನೆಗಳನ್ನು ಹೋಗಲಾಡಿಸಲು ಕನಕದಾಸರ ಕೀರ್ತನೆ ಮತ್ತು ತತ್ವಗಳು ಪ್ರೇರಕ ಶಕ್ತಿ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.

    ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಜಾತಿ ಕಾರಣಕ್ಕೆ ಕೆಲವು ವರ್ಗಗಳನ್ನು ಅಸ್ಪೃಶ್ಯರು ಎಂದು ಹೇಳುವ ಪದ್ಧತಿ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಇದನ್ನು ಕೆಲವರು ಕರ್ಮದ ಫಲ ಎಂದು ಬಿಂಬಿಸಿದ್ದಾರೆ. ಇದು ಸುಳ್ಳು ಎಂದು ಕನಕದಾಸರು ತೋರಿಸಿದ್ದಾರೆ. ಆ ಮೂಲಕ ಇದೊಂದು ಮಾನವ ನಿರ್ಮಿತ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

    ಕನಕದಾಸರಿಂದ ಪ್ರಸ್ತುತ ಸಮಾಜ ಸಮಾನತೆ ಕಡೆಗೆ ಹೋಗುತ್ತಿದೆ. ಮೇಲು-ಕೀಳು ಎಂಬ ಭಾವನೆಗಳು ಕಡಿಮೆಯಾಗುತ್ತಿದೆ. ಸಮಾಜದ ಒಳಿತಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.

    ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, ಸದಸ್ಯೆ ಎಂ.ಮಾನಸಾ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪವಿಭಾಗಾಧಿಕಾರಿ ಗೀತಾ ಹುಡೇದ್, ತಹಸೀಲ್ದಾರ್ ಮಂಜುಳಾ, ತಾಪಂ ಇಒ ಮಹೇಶ್, ಶಿಕ್ಷಕಿ ಕವಿತಾ, ಬಿಇಒ ಚಂದ್ರಪಾಟೀಲ್, ಡಿವೈಎಸ್ಪಿ ನಾಗರಾಜು, ಗ್ರೇಡ್ 2 ತಹಸೀಲ್ದಾರ್ ಶಿವಕುಮಾರ್, ನಗರಸಭೆ ಪೌರಯುಕ್ತ ನಂಜುಂಡಸ್ವಾಮಿ, ಸಿಡಿಪಿಒ ನಾಗೇಶ್, ಎ.ಡಿ.ಆರ್.ಎಲ್ ಚೇತನ್, ಕಸಾಪ ಅಧ್ಯಕ್ಷ ನಾಗರಾಜು, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ರಾಚೇಗೌಡ ಮತ್ತಿತರರಿದ್ದರು.

    ಅಧ್ಯಕ್ಷರ ಆರೋಪ ಸತ್ಯಕ್ಕೆ ದೂರವಾದದ್ದು: ನಗರಸಭೆ ಕೌನ್ಸಿಲ್ ಬೋರ್ಡ್ ಅನ್ನು ಶಾಸಕರು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ರೇಖಾ ಅವರ ಆರೋಪಕ್ಕೆ ಪ್ರತಿಕಿಯಿಸಿದ ಶಾಸಕರು, ಅಧ್ಯಕ್ಷೆ ರೇಖಾ ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಸ್ವಗ್ರಾಮ ಶಂಕನಪುರಕ್ಕೆ ನಿವಾಸಿಗಳ ಒತ್ತಾಯದಂತೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಲು ಆರ್‌ಒ ಪ್ಲಾಂಟ್ ಅನ್ನು ಶಂಕನಪುರಕ್ಕೆ ಸ್ಥಳಾಂತರ ಮಾಡುವಂತೆ ಎರಡು ತಿಂಗಳ ಹಿಂದೆಯೇ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದ್ದೆ. ಆದರೆ ಈ ಕೆಲಸವನ್ನು ಅಧಿಕಾರಿಗಳು ಮಾಡಿರಲಿಲ್ಲ. ಈ ಬಗ್ಗೆ ಅಂದು ನಗರಸಭೆ ಇಂಜಿನಿಯರ್ ಅನ್ನು ಪ್ರಶ್ನೆ ಮಾಡಿದಾಗ ಕೌನ್ಸಿಲ್ ಗಮನಕ್ಕೆ ತರಬೇಕು ಎಂದರು. ನಿನಗೆ ತಲೆ ಕೆಟ್ಟಿದ್ದೀಯ ಎಂದು ಸ್ವಲ್ಪ ಕಾರವಾಗಿ ಹೇಳಿದ್ದೆ. ಅದನ್ನೇ ದೊಡ್ಡದಾಗಿ ಏನೋ ಮಾತನಾಡಿದ್ದಾರೆ ಎಂಬುವ ರೀತಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts