More

    ತಾಪಂ ಕಚೇರಿ ಡಿಜಿಟಲ್ ಬೋರ್ಡ್‌ಗೆ ಹಾನಿ

    ಬೆಳಗಾವಿ: ಇಲ್ಲಿನ ತಾಪಂ ಆವರಣದಲ್ಲಿ ಕಿಡಿಗೇಡಿಗಳ ಉಪಟಳ ಹೆಚ್ಚಾಗಿದ್ದು, ಆವರಣದಲ್ಲಿ ವಿವಿಧ ಕಚೇರಿಗಳ ಬೋರ್ಡ್ ಕದ್ದೊಯ್ದಿದ್ದಾರೆ. ತಾಲೂಕು ಕಚೇರಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಡಿಜಿಟಲ್ ಬೋರ್ಡ್‌ಗೆ ಹಾನಿ ಮಾಡಿದ್ದಾರೆ.

    ಹಲವು ತಿಂಗಳಿಂದ ಈ ಬೋರ್ಡ್ ಮೂಲಕ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಕಿಡಿಗೇಡಿಗಳ ಕೃತ್ಯವನ್ನೇ ಬಂಡವಾಳವ ನ್ನಾಗಿಸಿಕೊಂಡಿರುವ ಅಧಿಕಾರಿಗಳು ಡಿಜಿಟಲ್ ಬೋರ್ಡ್ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇದೇ ಆವರಣದಲ್ಲಿರುವ ಅಕ್ಷರ ದಾಸೋಹ ವಿಭಾಗದ ಕಚೇರಿಯ ಬೋರ್ಡ್‌ಗಳನ್ನು ಯಾರೋ ಕಿತ್ತೊಯ್ದಿದ್ದಾರೆ ಎಂದು ಸಿಬ್ಬಂದಿಯೇ ಹೇಳುತ್ತಾರೆ. ಈ ಬಗ್ಗೆ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಮಳೆ ಗಾಳಿಗೆ ಹಾಳಾಗಿದೆ. ರಜೆ ದಿನಗಳಲ್ಲಿ ಕಚೇರಿ ಆವರಣದಲ್ಲಿ ಕ್ರಿಕೆಟ್ ಆಡುತ್ತಾರೆ. ಆಗ ಹಾನಿಯಾಗಿರಬಹುದು ಎಂದು ಸಬೂಬು ನೀಡುತ್ತಾರೆ ಹೊರತು, ಅದನ್ನು ರಿಪೇರಿ ಮಾಡಿಸಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಆಸಕ್ತಿ ತೋರದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಕಚೇರಿ ಆವರಣದಲ್ಲೇ ಸರ್ಕಾರಿ ಆಸ್ತಿಯ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಮೇಲಧಿಕಾರಿಗಳ ನಿರ್ಲಕ್ಷೃದ ಬಗ್ಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಜರುಗಿಸಲಿ ಎನ್ನುವುದು ಜನರ ಒತ್ತಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts