More

    ತಾತ್ಕಾಲಿಕ ಚೀಟಿ ಕೊಟ್ಟು ಪಡಿತರ ಕೊಡಿ

    ಕಲಬುರಗಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರೂ ಉಪವಾಸ ಇರಕೂಡದು. ಹೀಗಾಗಿ ಬಡತನ ರೇಖೆ ಕೆಳಗಿರುವವರಿಗೆ ಎರಡು ತಿಂಗಳ ಪಡಿತರ ನೀಡುವಂತೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಆದೇಶಿಸಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
    ಕೋವಿಡ್-19 ತಡೆಗಟ್ಟಲು ಜಾರಿಗೊಳಿಸಿರುವ ಲಾಕ್ಡೌನ್ನಿಂದಾಗಿ ಜನತೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಕುರಿತು ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ಸಭೆ ನಡೆಸಿದ ಅವರು, ಪಡಿತರ ಚೀಟಿಗೆ ಅಜರ್ಿ ಸಲ್ಲಿಸಿರುವ 15,799 ಜನರಿಗೆ ತಕ್ಷಣವೇ ತಾತ್ಕಾಲಿಕ ಚೀಟಿ ವಿತರಿಸಿ ರೇಷನ್ ಹಂಚಿಕೆ ಮಾಡಬೇಕು. ಅಲ್ಲದೆ ಗುರುತಿಸಿರುವ ಎಲ್ಲ ನಿರ್ಗತಿಕರು, ರೇಷನ್ ಕಾಡರ್್ ಇಲ್ಲದವರಿಗೂ ಪಡಿತರ ಕೊಡುವಂತೆ ಸಲಹೆ ನೀಡಿದರು.
    ನಿರ್ಗತಿಕರಿಗೆ ಊಟದ ಬದಲಿಗೆ ರೇಷನ್ ನೀಡಿದರೆ ತಮಗೆ ಬೇಕಾದಂಥ ಅಡುಗೆ ಮಾಡಿ ಉಣ್ಣಬಹುದು. ಯಾರೂ ಹಸಿವಿನಿಂದ ಬಳಲಬಾರದು. ಅನಿವಾರ್ಯ ಇದ್ದವರಿಗೆ ಮಾತ್ರ ಊಟ ಕೊಡಿ ಎಂದರು.
    ವಿಜಯಪುರದಿಂದ ಬರುವಾಗ ಜೇವರ್ಗಿಯ ಜೋಪಡಿಗಳಲ್ಲಿನ 104 ಕುಟುಂಬದವರು ಸೇರಿ ಜಿಲ್ಲೆಯ ಎಲ್ಲ ಕಡೆಗಳಲ್ಲಿರುವ 2442 ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಬೇಕು. ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದರು.
    ಕರೊನಾ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಶರತ್ ಬಿ. ಹಾಗೂ ಆಹಾರ ಇಲಾಖೆ ಡಿಸಿ ಡಿ.ಎಂ.ಪಾಣಿ ಮಾಹಿತಿ ನೀಡಿದರು.
    ರಾಜ್ಯದಲ್ಲಿ 450 ಹಾಪ್ಕಾಮ್ಸ್ ಮಳಿಗೆಗಳು ಪ್ರತಿನಿತ್ಯ 350 ಮೆಟ್ರಿಕ್ ಟನ್ ತರಕಾರಿ ಮತ್ತು ಹಣ್ಣುಗಳನ್ನು ರೈತರಿಂದ ಖರೀದಿಸಿ ಮಾರಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಸರ್ಕಾರವೇ ಎಲ್ಲವನ್ನು ಖರೀದಿಸಲಾಗಲ್ಲ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತೇವೆ. ಜಿಲ್ಲೆಯಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಮುಂದಾದರೆ ಗ್ರೀನ್ ಪಾಸ್ ವಿತರಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಸಪ್ಪಂಡಿ ಅವರಿಗೆ ಡಿಸಿಎಂ ಕಾರಜೋಳ ನಿರ್ದೇಶನ ನೀಡಿದರು.
    ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮೂಡ, ಕನೀಜ್ ಫಾತಿಮಾ, ಸುಭಾಷ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಡಾ.ಅವಿನಾಶ ಜಾಧವ್, ಎಂ.ವೈ. ಪಾಟೀಲ್ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
    ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ನಗರ ಪೊಲೀಸ್ ಆಯುಕ್ತ ಸತೀಶಕುಮಾರ್ ಎನ್., ಜಿಪಂ ಸಿಇಒ ಡಾ.ರಾಜಾ ಪಿ., ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ. ಎಡಿಸಿ ರಾಚಪ್ಪ ಇತರರಿದ್ದರು.

    ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಗೊಳಿಸಿ
    ಆರೋಗ್ಯ ತುರ್ತು ಸ್ಥಿತಿ ವಿಧಿಸಿದ್ದನ್ನೇ ಬಂಡವಾಳ ಮಾಡಿಕೊಂಡು ಪಡಿತರ ಚೀಟಿದಾರರಿಂದ ಹೆಚ್ಚಿನ ಹಣ ಪಡೆದು ಎರಡು ತಿಂಗಳ ರೇಷನ್ ಕಡಿಮೆ ಪ್ರಮಾಣದಲ್ಲಿ ವಿತರಿಸಲಾಗುತ್ತಿದೆ ಎಂದು ಶಾಸಕರಾದ ಸುಭಾಷ ಗುತ್ತೇದಾರ್, ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ ದೂರಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಕಾರಜೋಳ, ಆಳಂದ ತಾಲೂಕಿನ ಸಾವಳೇಶ್ವರ, ಹಿತ್ತಲಶಿರೂರ ಮತ್ತು ವಾಗ್ಧರಿ, ಜೇವರ್ಗಿ ತಾಲೂಕಿನ ಶಾಖಾಪುರ ಎಸ್.ಎ. ಹಾಗೂ ಕಲಬುರಗಿ ತಾಲೂಕಿನ ರಾಜಾಪುರದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಿ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗೆ ತಾಕೀತು ಮಾಡಿದರು.


    ಬೇಸಿಗೆ ಇದ್ದುದ್ದರಿಂದ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ ಸಮಿತಿ ಸಭೆ ಕರೆದು ಜಿಲ್ಲಾಧಿಕಾರಿ ಅನುಮೋದನೆ ಪಡೆದು ತಕ್ಷಣ ಕೆಲಸ ಅರಂಭಿಸಬೇಕು.
    | ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts