More

    ತರಾತುರಿಯಲ್ಲಿ ಸನ್ಮಾನ ಸ್ವೀಕರಿಸಿ ದೆಹಲಿಗೆ ಹೊರಟ ಸಿಎಂ

    ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಸುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ನಗರದ ಹಳೇ ಜೈಲು ಆವರಣದಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ತರಾತುರಿಯಲ್ಲಿ ಬಂದು ಸನ್ಮಾನ ಸ್ವೀಕರಿಸಿ ದೆಹಲಿಗೆ ಪ್ರಯಾಣ ಬೆಳೆಸಿದರು.

    ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಿಗದಿಯಾಗಿದ್ದರೂ ದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಕಾರಣದಿಂದ ಸಿಎಂ ಮುಂಚಿತವಾಗಿ 8.15ಕ್ಕೆ ಆಗಮಿಸಿ ಮೂರ್ನಾಲ್ಕು ನಿಮಿಷದಲ್ಲೇ ಅಭಿನಂದನೆ ಸ್ವೀಕರಿಸಿ, ಸಭೆ ಉದ್ದೇಶಿಸಿ ಮಾತನಾಡಿ ಅಲ್ಲಿಂದ ನಿರ್ಗಮಿಸಿದರು.

    ವೇದಿಕೆಗೆ ಬರುತ್ತಿದ್ದಂತೆ ಮೈಕ್ ಹಿಡಿದು ಮಾತು ಆರಂಭಿಸಿದ ಸಿಎಂ, ಬಳಿಕ ಆಯೋಜಕರ ವಿವಿಧ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಸಿಎಂಗೆ ಸಂಘದ ಪದಾಧಿಕಾರಿಗಳು 5.5 ಕೆಜಿ ತೂಕದ ಬೆಳ್ಳಿ ಗದೆ ನೀಡಿ ಅಭಿನಂದಿಸಿದರು.

    ಆದ್ಯತೆ ಮೇರೆಗೆ ಬೇಡಿಕೆ ಈಡೇರಿಕೆ ಭರವಸೆ: ರಾಜ್ಯದಲ್ಲಿ 24 ಸಾವಿರ ಗುತ್ತಿಗೆದಾರರು, 2.5 ಲಕ್ಷಕ್ಕೂ ಅಧಿಕ ತುಂಡು ಗುತ್ತಿಗೆದಾರರಿದ್ದು, ಬೇಡಿಕೆಗಳನ್ನು ಪರಿಶೀಲಿಸಿ ಆದ್ಯತೆ ಮೇರೆಗೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

    1ರಿಂದ 5 ಲಕ್ಷ ರೂ.ವರೆಗಿನ ವಿದ್ಯುತ್ ಕಾಮಗಾರಿಗಳನ್ನು ಒಟ್ಟಾಗಿ ಕ್ರೊಢೀಕರಿಸಿ ಬಹುಕೋಟಿ ಟೆಂಡರ್ ನೀಡುವುದನ್ನು ರದ್ದುಮಾಡಿ ತುಂಡು ಗುತ್ತಿಗೆಯಾಗಿ ಸ್ಥಳೀಯ ಗುತ್ತಿಗೆದಾರರಿಗೆ ನೀಡುವುದು, ಕೆಇಆರ್​ಸಿ 4.02ರಲ್ಲಿ ವಿದ್ಯುತ್ ಗುತ್ತಿಗೆದಾರರ ಹೆಸರನ್ನು 2017ರ ಹಿಂದೆ ಇದ್ದ ಹಾಗೆ ಮುಂದುವರಿಸುವುದು, ಗುತ್ತಿಗೆದಾರರ ಪರವಾನಗಿ 2ರಿಂದ 1ನೇ ದರ್ಜೆಗೆ ಅನುಭವ ಆಧಾರದ ಮೇಲೆ ನೀಡುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಸಿಎಂಗೆ ಮನವಿ ಸಲ್ಲಿಸಿದರು.

    ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್​ಸಿ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್​ಸಿ ಎಸ್.ರುದ್ರೇಗೌಡ, ರಾಜ್ಯ ಮಾಜಿ ಉಪಾಧ್ಯಕ್ಷ ಸಿ.ರಮೇಶ್, ಜಿಲ್ಲಾಧ್ಯಕ್ಷ ಬಿ.ವಿಜಯಕುಮಾರ್, ಪ್ರಮುಖರಾದ ಪ್ರಭಾಕರ್, ರಾಘವೇಂದ್ರ, ಮಂಜುನಾಥ, ಶಿವಯೋಗಿ, ಪ್ರಣವ್​ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts