More

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

    ರಾಮದುರ್ಗ: ತಾಲೂಕಿನ ಮುದೇನೂರ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ದಿನ ಗ್ರಾಮಸ್ಥರು ಟೆಂಟ್ ನಿರ್ಮಿಸಿ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಗ್ರಾಮಸ್ಥರು ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಮದುರ್ಗ ಘಟಕ ವತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ನಿಜಗುಲಿ ಮಾತನಾಡಿ, ಶಿಕ್ಷಣಾಧಿಕಾರಿಗಳಾದ ಎಂ.ಆರ್. ಅಲಾಸೆ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿಗಳಾಗಿದ್ದು ತಾಲೂಕಿನ ಶೈಕ್ಷಣಿಕ ಚಟುವಟುಕೆಗಳ ಬಗ್ಗೆ ಕಾಳಜಿವುಳ್ಳವರಾಗಿದ್ದಾರೆ. ಅವರ ಮೇಲೆ ನಡೆಸಿದ ಹಲ್ಲೆ ಅಪರಾಧವಾಗಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಮೇಶ ಅರಕೇರಿ ಮಾತನಾಡಿದರು.

    ಕ್ಷೇತ್ರ ಸಮನ್ವಯಾಧಿಕಾರಿ ಜಿ.ಸಿ.ಶೀಲವಂತಮಠ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಪಾಟೀಲ, ಸದಸ್ಯರಾದ ಸಿ.ಎನ್.ಕಲ್ಲೂರ, ಶಂಕ್ರಮ್ಮ ಹುಗ್ಗಿ, ಗೀತಾ ಕೋತಿನತೋಟ, ರಾಜು ಬಸರಿಕಟ್ಟಿ, ಸುರೇಶ ಆಲಗುಂಡಿ, ಹೇಮಾ ಬುದಿ, ಶಂಕ್ರಮ್ಮ ಹುಲ್ಲುರ, ಎಂ.ಎಸ್.ಗೋವಣ್ಣವರ, ವಿ. ಬಿ. ಹೇರಲಗಿ, ಬಿ.ವೈ.ಅಪ್ಪಾಜಿಗೌಡ್ರ, ಸುರೇಶ ಹುಚ್ಚಣ್ಣವರ, ಸುರೇಶ ಅಣ್ಣಿಗೇರಿ, ಕೆ.ವೈ.ಗದಿಗೆನ್ನವರ, ಕೆ.ಎನ್.ಯಡ್ರಾವಿ, ಸಿ.ಆರ್.ಪಿ ಸಂಘದ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ವೈ.ಹಕಾಟಿ, ಬಿ.ಆರ್.ಪಿ ರಾಮಚಂದ್ರ ಹಿರೇನಿಂಗಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts