More

    ತಿಪ್ಪೂರು ಸುತ್ತಮುತ್ತ ಆನೆಗಳು ಪ್ರತ್ಯಕ್ಷ

    ಮದ್ದೂರು: ತಾಲೂಕಿನ ತಿಪ್ಪೂರು ಗ್ರಾಮದ ಸುತ್ತಮುತ್ತ ಮೂರು ಆನೆಗಳು ಒಟ್ಟಾಗಿ ಸೋಮವಾರ ಪ್ರತ್ಯಕ್ಷವಾಗಿವೆ.

    ಚನ್ನಪಟ್ಟಣದ ಶ್ರೀ ನರಸಿಂಹಸ್ವಾಮಿ ದೇಗುಲದ ಬಳಿಯಿರುವ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿರುವ ಆನೆಗಳು. ಬರುವ ಮಾರ್ಗಮಧ್ಯದಲ್ಲಿ ರೈತರು ಬೆಳೆದಿದ್ದ ಭತ್ತ, ಕಬ್ಬು, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ತುಳಿದು ಅಪಾರ ನಷ್ಟ ಉಂಟುಮಾಡಿವೆ.

    ಆನೆಗಳನ್ನು ಕಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ವಲಯ ಅಧಿಕಾರಿ ಗವಿಯಪ್ಪ, ಗಸ್ತು ಅರಣ್ಯ ಪಾಲಕ ಸುದರ್ಶನ್, ಸಿಬ್ಬಂದಿ ಸಾಗರ್, ಈರೇಗೌಡ, ಸಿದ್ದರಾಜು, ಮೋಟಪ್ಪ ಸ್ಥಳಕ್ಕೆ ಆಗಮಿಸಿ ಆನೆಗಳ ಚಲನವಲನ ಪರೀಕ್ಷಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ರಾತ್ರಿಯಾದ ನಂತರ ಆನೆಗಳನ್ನು ವಾಪಸ್ ಅರಣ್ಯ ಪ್ರದೇಶಕ್ಕೆ ಕಳುಹಿಸಲು ಮುಂದಾಗಿದ್ದಾರೆ. ಜತೆಗೆ ಆನೆಗಳು ಯಾವ ಸ್ಥಳದಲ್ಲಿವೆ ಎಂಬುದನ್ನು ಪತ್ತೆ ಮಾಡಲು ಡ್ರೋನ್ ಬಳಕೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts