More

    ಡೆಂೆ ನಿಯಂತ್ರಣಕ್ಕೆ ಲಾರ್ವ ಸಮೀಕ್ಷೆ

    ಚಿತ್ರದುರ್ಗ: ನಗರದ ಹಲವೆಡೆ ಮನೆ-ಮನೆಗಳಿಗೆ ಭೇಟಿ ನೀಡಿದ ಟಿಎಚ್‌ಒ ಕಚೇರಿಯ ಸಿಬ್ಬಂದಿ ಡೆಂೆ ನಿಯಂತ್ರಣ ಸಂಬಂಧ ಶುಕ್ರವಾರ ಲಾರ್ವ ಸಮೀಕ್ಷೆ ನಡೆಸಿದರು.

    ಆರೋಗ್ಯ ಇಲಾಖೆಯೂ ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಲಾರ್ವ ಸಮೀಕ್ಷೆ ನಡೆಸುತ್ತಿದೆ. ಅದಕ್ಕಾಗಿ ತಂಡಗಳನ್ನು ರಚಿಸಿದ್ದು, ವಿವಿಧೆಡೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.

    ನಗರದಾದ್ಯಂತ 39,008 ಮನೆಗಳಿಗೆ 64 ತಂಡಗಳು ಭೇಟಿ ನೀಡಿದ್ದಾರೆ. ಈವರೆಗೂ 23 ಡೆಂೆ ಪ್ರಕರಣ ಕಂಡು ಬಂದಿದ್ದು, ಚಿಕಿತ್ಸೆ ಪಡೆದು ಎಲ್ಲರೂ ಚೇತರಿಸಿಕೊಂಡಿದ್ದಾರೆ.

    ಡೆಂೆ ಪ್ರಕರಣ ಕಂಡು ಬಂದ ಕೆಳಕೋಟೆ, ಮುನ್ಸಿಪಲ್ ಕಾಲನಿ, ಕೊಲ್ಲಾಪುರದ ಮಹಾಲಕ್ಷ್ಮಿ ದೇಗುಲ ಬಳಿ ಪರಿಶೀಲನೆ ನಡೆಸಿದರು. ಪರಿಸರ, ಮನೆಯ ಸುತ್ತ್ತಲಿನ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಿ, ನೀರಿನ ತೊಟ್ಟಿ ಶುಚಿಗೊಳಿಸಿ, ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಪಡೆಯಲು ಮುಂದಾಗಿ ಎಂದು ಸಾರ್ವಜನಿಕರೊಂದಿಗೆ ಸಮಾಲೋಚನೆ ವೇಳೆ ಸಲಹೆ ನೀಡಿದರು.

    ಜೈವಿಕ, ರಾಸಾಯನಿಕ, ಪ್ರಾಕೃತಿಕ ವಿಧಾನ ಅನುಸರಿಸುವ ಕುರಿತು ಮಾರ್ಗದರ್ಶನ ನೀಡಿದರು. ಸೊಳ್ಳೆಗಳ ಸಂತಾನೋತ್ಪತ್ತಿ ಮಾಡುವ ನೀರಿನ ತೊಟ್ಟಿಗಳನ್ನು ತೋರಿಸಿ ಲಾರ್ವ ಹಂತದಲ್ಲೇ ನಾಶಪಡಿಸಲು ಚಿಠಿಛಿ ದ್ರಾವಣ ಸಿಂಪಡಿಸಿ. ಚರಂಡಿಯಲ್ಲಿ ನಿಂತ ನೀರಿಗೆ ವೇಸ್ಟ್ ಆಯಿಲ್ ಉಪಯೋಗಿಸಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ತಿಳಿಸಿದರು.

    ಇದೇ ವೇಳೆ ಕರಪತ್ರ ವಿತರಿಸಲಾಯಿತು. ನೀರಿನ ತೊಟ್ಟಿ ಒಳಚರಂಡಿಯ ನೂನ್ಯತೆ ಸರಿಪಡಿಸಲು ನಗರಸಭೆಗೆ ಮಾಹಿತಿ ನೀಡಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗುರುಮೂರ್ತಿ, ಆರೋಗ್ಯ ಸುರಕ್ಷತಾ ಅಧಿಕಾರಿ ಕಲ್ಪನಾ ರೆಡ್ಡಿ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts