More

    ಸಾಕುಪ್ರಾಣಿಗಳ ರೋಗ ತಡೆಗೆ ಮದ್ದು

    ಚಿತ್ರದುರ್ಗ: ಜಾನುವಾರುಗಳಿಗೆ ತಗುಲುವ ವಿವಿಧ ಕಾಯಿಲೆಗಳನ್ನು ನಿಯಂತ್ರಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಈಗ ಲಸಿಕೆ ಹಾಕುವ ಕಾರ‌್ಯದಲ್ಲಿ ಬಿಜಿಯಾಗಿದೆ. ಕುರಿಗಳನ್ನು ಕಾಡುವ ಕರಳುಬೇನೆ(ಇಟಿ)ಹತೋಟಿಗೆ ಈಗಾಗಲೇ ಆರಂಭವಾಗಿರುವ ಲಸಿಕಾ ಕಾರ‌್ಯ ಜೂನ್ ಅಂತ್ಯದವರೆಗೂ ನಡೆಯಲಿದೆ.

    ಜಿಲ್ಲೆಗಳ ಕುರಿಗಳ ಜತೆ ಅನ್ಯ ಜಿಲ್ಲೆಗಳ ಕುರಿಗಳಿಗೂ ಲಸಿಕೆ ಹಾಕಲು ಅವಕಾಶವಾಗುವಂತೆ ಜಿಲ್ಲೆಯಲ್ಲಿ ಈಗಾಗಲೇ 4 ಲಕ್ಷ ಡೋಸ್ ಲಸಿಕೆ ಸಂಗ್ರಹವಿದ್ದು, ಮೇ 22ರಂದು 15 ಲಕ್ಷ ಡೋಸ್ ಲಸಿಕೆ ಬಂದಿದೆ. ಜಿಲ್ಲೆಯಲ್ಲಿ 13.50 ಲಕ್ಷ ಕುರಿಗಳಿವೆ. ಕಂದುರೋಗ(ಗಭ ರ್ ಪಾತ/ಬ್ರುಸೆಲೋಸಿಸ್)ನಿವಾರಣೆಗಾಗಿ 4ರಿಂದ 8 ತಿಂಗಳ ವಯೋಮಿತಿ ಒಳಗಿನ ಎಮ್ಮೆ, ಆಕಳ ಹೆಣ್ಣು ಕರುಗಳಿಗೆ ಲಸಿಕೆ ಹಾಕಲಾಗುತ್ತಿದೆ.

    ಮೇ 15ರಿಂದ ಆರಂಭವಾಗಿರುವ ಲಸಿಕಾ ಕಾರ‌್ಯ ಈ ತಿಂಗಳ ಅಂತ್ಯದವರೆಗೂ ನಡೆಯಲಿದೆ. 15 ಸಾವಿರ ಡೋಸ್ ಲಸಿಕೆ ಸಂಗ್ರಹವಿದ್ದು, ಇದು ಇನ್ನೊಂದು ಸುತ್ತಿಗೂ ಸಾಕಾಗಲಿದೆ.

    ದನ,ಎಮ್ಮೆಗಳನ್ನು ಕಾಡುವ ಚರ್ಮಗಂಟು ಕಾಯಿಲೆ(ಎಲ್‌ಸಿಡಿ)ಯ ಹತೋಟಿಗೆಂದು ಹಾಕುವ ವ್ಯಾಕ್ಸಿನ್ 2.05 ಡೋಸ್ ಇದೆ. ಇದನ್ನು ಕೂಡ ಈಗ ಕಳೆದ ವರ್ಷ ಜಿಲ್ಲೆಯಲ್ಲಿ ಎಲ್ಲೆಲ್ಲಿ ಈ ಹಿಂದೆ ಈ ರೋಗ ಕಾಣಿಸಿಕೊಂಡಿತ್ತೋ ಅಂಥ ಪ್ರದೇಶಗಳಲ್ಲಿ ಮುಂಜಾಗ್ರತೆಯಾ ಗಿ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 1419 ದನಗಳು ಅಸು ನೀಗಿದ್ದು,ಅವುಗಳ ಮಾಲಿಕರಿಗೆ 2.16 ಕೋಟಿ ರೂ.ಪರಿಹಾರ ವಿತರಿಸಲಾಗಿದೆ.

    ಈ ಮೂರು ವ್ಯಾಕ್ಸಿನೇಷನ್ ಬಳಿಕ ಗಂಟಲುಬೇನೆ (ಎಚ್‌ಎಸ್)ಎಮ್ಮೆ,ದನಗಳಿಗೆ ಕೊಡಬೇಕಾಗುತ್ತದೆ. ಸದ್ಯಕ್ಕೆ ಎಚ್‌ಎಚ್ ವ್ಯಾಕ್ಸಿನ್ 20 ಸಾವಿರ ಡೋಸ್ ಸ್ಟಾಕ್ ಇದೆ. ಜುಲೈನಿಂದ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗುತ್ತದೆ. ಸದ್ಯಕ್ಕೆ ಇನ್ನೂ ಈ ವ್ಯಾಕ್ಸಿನ್‌ಪೂರೈಕೆಯಾಗಿಲ್ಲ. ಜಿಲ್ಲೆಯಲ್ಲಿ 2.25 ಲಕ್ಷ ದನ,1.13 ಲಕ್ಷ ಎಮ್ಮೆ, 13.50 ಲಕ್ಷ ಕುರಿಗಳು ಹಾಗೂ 3.85 ಲಕ್ಷ ಮೇಕೆಗಳಿವೆ.


    ಇಲಾಖೆಗೆ ಸಿಬ್ಬಂದಿ ಕೊರತೆ ರೋಗ
    ಜಾನುವಾರುಗಳ ಕಾಯಿಲೆ ಹತೋಟಿಗೆ ಸರ್ಕಾರಗಳೇನೋ ಅಗತ್ಯ ಲಸಿಕೆಗಳನ್ನು ಪೂರೈಸುತ್ತಿದ್ದರೂ,ರಾಜ್ಯದೆಲ್ಲೆಡೆ ಈ ಇಲಾಖೆಯಲ್ಲಿ ಸಾಕಷ್ಟು ವೈದ್ಯ-ಸಿಬ್ಬಂದಿ ಕೊರತೆ ಇದೆ. ರಾಜ್ಯದಲ್ಲಿ 2022 ಮಾರ್ಚ್ 21ರ ಅಂತ್ಯಕ್ಕೆ ಇದ್ದಂತೆ 18565 ವಿವಿಧ ದರ್ಜೆ ಮಂಜೂರು ಹು ದ್ದೆಗಳಿದ್ದು,ಇವುಗಳ ಪೈಕಿ ಸದ್ಯ ಭರ್ತಿ ಇರುವಂಥ ಹುದ್ದೆಗಳ ಸಂಖ್ಯೆ 9366. ಹೆಚ್ಚೂಕಡಿಮೆ ಶೇ.50 ಹುದ್ದೆಗಳು ಖಾಲಿ ಉಳಿದಿದ್ದು,ಲಸಿಕೆ ಸಮರ್ಪಕ ಕಾರ‌್ಯಾನುಷ್ಠಾಕ್ಕೆ ಅಗತ್ಯ ಸಿಬ್ಬಂದಿ ಭರ್ತಿ ಆಗಬೇಕೆಂಬ ಅಭಿಪ್ರಾಯ ಇಲಾಖೆಯಲ್ಲಿ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ 156 ಪಶು ಆಸ್ಪತ್ರೆ, ಚಿಕಿತ್ಸಾಲಯ,ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ ಪಾಲಿಕ್ಲಿನಿಕ್‌ಗಳಿದ್ದು,ಇವುಗಳಲ್ಲಿರುವ 606 ಹುದ್ದೆಗಳಲ್ಲಿ 300 ಖಾಲಿ ಇವೆ.


    ಕೋಟ್
    ಕಂದುರೋಗ, ಚರ್ಮಗಂಟು ರೋಗ,ಕರುಳು ಬೇನೆ ಹಾಗೂ ಗಂಟಲು ಬೇನೆಗೆ ಲಸಿಕೆ ಹಾಕಲಾಗುತ್ತಿದ್ದು,ಎಲ್ಲ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗಿವೆ. ಯಾವುದೇ ಲಸಿಕೆ ಕೊರತೆ ಇಲ್ಲ. ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ‌್ಯವಿನ್ನೂ ಆರಂಭಗೊಂಡಿಲ್ಲ.
    ಎ.ಬಾಬುರತ್ನ,ಡಿಡಿ,ಪಶುವೈದ್ಯಕೀಯ ಸೇವಾ ಇಲಾಖೆ,ಚಿತ್ರದುರ್ಗ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts