More

    ಡಿ.೬ ರಂದು ಬೃಹತ್ ಐಕ್ಯತಾ ಸಮಾವೇಶ

    ಬಾಗಲಕೋಟೆ: ಡಾ.ಬಿ.ಆರ್.ಅಂಬೇಡ್ಕರ ಅವರ ೬೬ ನೇ ಪರಿನಿಬ್ಬಾಣ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದರು.
    ಅಂದು ಬೆಳಗ್ಗೆ ೧೧ ಗಂಟೆಗೆ ಸಮಾವೇಶ ನಡೆಯಲಿದ್ದು, ೧೨ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿಲ್ಲ.ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುವುದನ್ನು ಬಿಟ್ಟು ಕೇವಲ ದ್ವೇಷಭಾವನೆ ಮೂಡಿಸುತ್ತಾ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ದೇಶದಲ್ಲಿ ಬಿಜೆಪಿ ಸರ್ವಾಧಿಕಾರತ್ವ ಆಡಳಿತ ನಡೆಸುತ್ತಿದ್ದು, ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನದ ಆಶಯಗಳನ್ನು ತಿರುಚಿ ದಲಿತ ಮೇಲೆ ದೌರ್ಜನ್ಯ ಎಸಗುತ್ತಿದೆ. ಸಾಮಾಜಿಕ ನ್ಯಾಯ ಬುಡಮೇಲಾಗಿದೆ. ಯುವಕರಿಗೆ ಉದ್ಯೋಗ ದೊರಕುತ್ತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುವರ್ಣ ವ್ಯವಸ್ಥೆಯ ಮರುಸ್ಥಾಪನೆಗಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಗುರಿಯಾಗಿಸಿದೆ ಎಂದು ದೂರಿದರು.
    ವಿವಿಧ ದಲಿತ ಸಂಘಟನೆಗಳ ಮುಖಂಡರಾದ ದೇವನೂರ ಮಹಾದೇವಪ್ಪ, ಶಂಕರ ಮಾವಳ್ಳಿ, ಎನ್.ವೆಂಕಟೇಶ, ಡಿ.ಜಿ.ಸಾಗರ, ಗುರುಪ್ರಸಾದ ಕೆರಗೋಡು ಸೇರಿದಂತೆ ಅನೇಕರು ಆಗಮಿಸುವರು. ಜಿಲ್ಲೆಯಿಂದ ದಲಿತ ಸಂಘಟನೆಗಳ ಅಂದಾಜು ೫ ಸಾವಿರ ಜನರು ಅಂದಿನ ಸಮಾವೇಶದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
    ಮುಖಂಡರಾದ ಯುವರಾಜ ಬಂಡಿ, ಹಣಮಂತ ಚಿಮ್ಮಲಗಿ, ಬಸವರಾಜ ಹಳ್ಳದಮನಿ, ಬಸವರಾಜ ಪಾತ್ರೋಟಿ, ಕಾಶೀಂಅಲಿ ಗೋಠೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts